Hot Posts

6/recent/ticker-posts

10 ನಿಮಿಷದಲ್ಲಿ 2 ವಿಧದ ಚಟ್ನಿ

ನಾನು ಇವತ್ತು 10 ನಿಮಿಷದಲ್ಲಿ 2 ಟೈಪ್ ಚಟ್ನಿ ಮಾಡೋದನ್ನ ಹೇಳ್ತಿನಿ…

(1)ಒಂದೆಲಗದ ಚಟ್ನಿ: ಒಂದು ಮುಷ್ಟಿ ಒಂದಲಗ ಚೆನ್ನಾಗಿ ತೊಳೆದು ಇಟ್ಟುಕೊಂಡು 2 ಸ್ಪೂನ್ ಉದ್ದಿನಬೇಳೆ, 4 ಹಶೀಮೆಣಸು ಕೆಂಪಗೆ ಹುರಿದು ಕಾಯಿ, ಸೊಪ್ಪು ಉಪ್ಪು ಒಂದುಚಿಟಿಕೆ ಬೇಕಾದ್ರೆ ಸಕ್ಕರೆ ಹಾಕಿ ನುಣ್ಣಗೆ ರುಬ್ಬಿದ್ರೆ ಒಂದೆಲಗ ಚಟ್ನಿ ರೆಡಿ

(2)ಸವತೆಕಾಯಿ ಚಟ್ನಿ: 1 ಸವತೆಕಾಯಿ ಸಣ್ಣಗೆ ಹೋಳು ಮಾಡಿಟ್ಟುಕೊಳ್ಳಿ ಒಗ್ಗರಣೆಗೆ 1 ಸ್ಪೂನ್ ಕಡಲೆಬೇಳೆ, ಚೂರು ಶುಂಠಿ, 4 ಹಶೀಮೆಣಸು ಹುರಿದು ಕಟ್ ಮಾಡಿದ ಸವತೆಕಾಯಿ ಪೀಸ್ ಹಾಕಿ ಹುರಿದು ಹುಣಸೆ ಹಣ್ಣು, ಕಾಯಿ ಉಪ್ಪು ಹಾಕಿ ಬೀಸಿದರೆ ರುಚಿಯಾದ ಸವತೆಕಾಯಿ ಚಟ್ನಿ ರೆಡಿ ಕೊನೆಯಲ್ಲಿ ಬೇಕಾದರೆ ಸಾಸಿವೆ ಇಂಗು ಹಾಕಿ ಒಗ್ಗರಣೆ 😍😍

Post a Comment

0 Comments