Hot Posts

6/recent/ticker-posts

ಕಾರಿನಲ್ಲೇ ಹೃದಯಾಘಾತ, ಅಧಿಕಾರಿ ವಿನಾಯಕ ಭಟ್ ಹಠಾತ್ ನಿಧನ

  

ಶಿರಸಿ: ತಹಶಿಲ್ದಾರ ಕಚೇರಿಯ ಕಂದಾಯ ಅದಿಕಾರಿಯಾಗಿದ್ದ ವಿನಾಯಕ ಭಟ್ ಜು,೧೮,೨೦೨೩ ರಂದು ನಿಧನರಾಗಿದ್ದಾರೆ. ಅವರು ಮಂಗಳವಾರ ಮಿನಿವಿಧಾನ ಸೌಧದ ಮುಂದೆ ನಿಲ್ಲಿಸಿಡಲಾಗಿದ್ದ ತಮ್ಮ ಕಾರಿನಲ್ಲಿಯೇ ಮೃತಪಟ್ಟಿರುವುದು ಕಂಡು ಬಂದಿದೆ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹೃದಯಾಘಾತದಿಂದಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಮದ್ಯಾಹ್ನ ಕಾರಿನಲ್ಲಿ ಕಚೇರಿಗೆ ಬಂದಿದ್ದ ಅವರು ಸಂಜೆ ೫ ಗಂಟೆಯಾದರೂ ಕಚೇರಿಯ ಒಳಗಡೆ ಬಾರದಿರುವದನ್ನು ಕಂಡು ಕಚೇರಿಯ ಸಿಬ್ಬಂದಿಯೊರ್ವರು ಕಾರಿನ ಹತ್ತಿರ ಬಂದು ನೋಡಿದಾಗ ಅವರು ನಿಧನರಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ. ಮೂಲತಹ ಯಲ್ಲಾಪುರ ತಾಲೂಕಿನವರಾಗಿದ್ದ ಅವರು ಶಿರಸಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 

ಇಂದು ಅವರು ತಮ್ಮ ಕಾರಿನಲ್ಲಿಯೇ ನಿಧನರಾಗಿದ್ದಾರೆ. ಮೊದಲಿಗೆ ಗ್ರಾಮ ಲೆಕ್ಕಿಗರಾಗಿ ಸಿದ್ದಾಪುರದಲ್ಲಿ ಸೇವೆ ಸಲ್ಲಿಸಿದ ಬಳಿಕ ಪದೋನ್ನತಿಯೊಂದಿಗೆ ಕಂದಾಯ ಅಧಿಕಾರಿಯಾಗಿ ಜೊಯಿಡಾದಲ್ಲಿ ಸೇವೆ ಸಲ್ಲಿಸಿದ್ದರು .ಅಲ್ಲಿಂದ ಕಳೆದ ಎರಡು ವರ್ಷದ ಹಿಂದೆ ಶಿರಸಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಅಧಿಕಾರಿಯ ನಿಧನಕ್ಕೆ ಸಹಾಯಕ ಆಯುಕ್ತರಾದ ದೇವರಾಜ ಆರ್ ಹಾಗೂ ತಹಶಿಲ್ದಾರ ಶ್ರೀಧರ ಮುಂದಲಮನಿ ಸಂತಾಪ ವ್ಯಕ್ತಪಡಿಸಿದ್ದಾರೆ. 

Post a Comment

0 Comments