Hot Posts

6/recent/ticker-posts

ಇಲ್ನೋಡಿ ಈ ಹಲಸಿನ ಹಣ್ಣಿನ ಆಕಾರ…!

ಸುಲಿದ ತೆಂಗಿನಕಾಯಿ ಅಷ್ಟೇ ದೊಡ್ಡ! ಇದನ್ನು ರುದ್ರಾಕ್ಷಿ ಹಲಸು ಎನ್ನಲಾಗುತ್ತದೆ. ದುಂಡಗಿನ ಆಕೃತಿಯಲ್ಲಿರುವ ಕಾರಣ ಇದನ್ನು ಹಾಗೆ ಕರೆಯಲಾಯಿತು. ಮರದಲ್ಲಿ ಒತ್ತೊತ್ತಿಗೆ ಕಾಯಿ ಬೆಳೆಯುತ್ತದೆ. ಹಲಸಿನ ತೊಳೆಗಳು ಗಾತ್ರದಲ್ಲಿ ಸಣ್ಣದಿರುತ್ತವೆ. ಹಣ್ಣು ಮತ್ತು ಬಲು ಸಿಹಿ. ತೊಟ್ಟಿನ ಗೊಂಚಲಿನಲ್ಲಿ ಐದಕ್ಕಿಂತ ಅಧಿಕ ಕಾಯಿಗಳಿರುತ್ತವೆ. 
ತರಕಾರಿ ಆಗಿ ಬಳಸಬಹುದು. ಕಾಯಿಯೇ ಸಣ್ಣಗಾತ್ರದಲ್ಲಿರುವುದರಿಂದ ಇದನ್ನು ಹಪ್ಪಳ ಮಾಡಲು ವಿಶೇಷವಾಗಿ ಬಳಸುವುದಿಲ್ಲ. ''ಹಸಿದವನಿಗೆ ಹಲಸು ಉಂಡವನಿಗೆ ಮಾವು" ಎಂಬ ಮಾತಿದೆ ರುದ್ರಾಕ್ಷಿ ಹಲಸು ಒಬ್ಬ ಎರಡು ಹಣ್ಣು ಬೇಕಾದರೂ ತಿನ್ನಬಹುದು. ಜೂನ್ ಅಂತ್ಯದಲ್ಲಿ ಹಲಸಿನ ಸುಗ್ಗಿ ಮುಗಿಯುತ್ತದೆ ಈ ಸಂದರ್ಭದಲ್ಲಿ ಮೇಳಗಳು ಆಯೋಜಿಸಲಾಗುತ್ತಿದೆ ರುದ್ರಾಕ್ಷಿ ಹಲಸು ಅಷ್ಟೇ ಅಲ್ಲ ಮತ್ತಷ್ಟು ವಿವಿಧ ತಳಿಗಳನ್ನು ನೋಡಲು ಸಾಧ್ಯವಿರುತ್ತದೆ.


Post a Comment

0 Comments