Hot Posts

6/recent/ticker-posts

ಚಹಾ, ಕಾಫಿ ಜೊತೆ ತುಪ್ಪದ ಅವಲಕ್ಕಿ

ಹಾಯ್ ನಾನು ಮಾಲತಿ.. ಚಹಾ ಕಾಫಿ ಜೊತೆ ಒಳ್ಳೆಯ ಕಾಂಬಿನೇಶನ್ ತುಪ್ಪದ ಅವಲಕ್ಕಿ ಮಾಡೋದನ್ನ ಹೇಳ್ತಿನಿ, ಕೇವಲ 10ನಿಮಿಷದಲ್ಲಿ ಮಾಡಬಹುದು, ಒಂದು ಬಾಣಲೆಗೆ 2 ಚಮಚ ತುಪ್ಪ ಹಾಕಿ,2 ಸ್ಪೂನ್ ಶೇಂಗಾ ಹಾಕಿ ಸ್ವಲ್ಪ ಹುರಿದ ಮೇಲೆ ಅದಕ್ಕೆ 1 ಸ್ಪೂನ್ ಗೋಡಂಬಿ ಹಾಕಿ ಹುರುದು ತೆಗೆದಿಟ್ಟುಕೊಳ್ಳಬೇಕು 

ಅದೇ ಬಾಣಲೆಗೆ 1 ಸ್ಪೂನ್ ತುಪ್ಪ ಹಾಕಿ ಸ್ವಲ್ಪ ಜೀರಿಗೆ, ಸಾಸಿವೆ ಚೂರು ಇಂಗು 2 ಸಣ್ಣಗೆ ಹೆಚ್ಚಿದ ಈರುಳ್ಳಿ ಬೇವಿನಸೊಪ್ಪು 2 ಸಣ್ಣಗೆ ಹೆಚ್ಚಿದ ಹಶೀಮೆಣಸು, ಹಾಕಿ ಸ್ವಲ್ಪ ಫ್ರೈ ಮಾಡಿ 1 ಸ್ಪೂನ್ ತುಪ್ಪ ರುಚಿಗೆ ಬೇಕಷ್ಟು ಉಪ್ಪು ಸೂಪರ್ ಕಾಲು ಸ್ಪೂನ್ ಲಿಂಬು ರಸ 2 ಬೌಲ್ ಪೇಪರ್ ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹುರಿದಿಟ್ಟ ಶೇಂಗಾ, ಗೋಡಂಬಿ, ಕುತ್ತುoಬರೀಸೊಪ್ಪು ಮೇಲಿಂದ ಶೇವು ಹಾಕಿ ತುಪ್ಪದ ಅವಲಕ್ಕಿ ರುಚಿ ನೋಡಿ ಹೇಗಿರುತ್ತೆ ಅಂತ 🥰😋


Post a Comment

0 Comments