Hot Posts

6/recent/ticker-posts

ಇದು ಯಾವುದರಿಂದ ಮಾಡಿದ್ದು ಹೇಳಬಹುದಾ?

ಹಲಸು, ತೆಂಗಿನ ಕಾಯಿ ಹೀಗೆ ಹಲವು ವಸ್ತುಗಳ ಉಪ ಉತ್ಪನ್ನಗಳನ್ನು ತಯಾರಿಸಿ ಯಾವಾಗಲೂ ಉಪಯೋಗಕ್ಕೆ ಬರುವಂತಹ ಪ್ರಯತ್ನಗಳ ಬಗ್ಗೆ ಕೇಳಿದ್ದೇವೆ. ಬಾಳೆ ನಾರಿನ ಮೌಲ್ಯವರ್ಧನೆ ಕಾರ್ಯ ಪ್ರಗತಿಯಲ್ಲಿದೆ. ಇಲ್ಲೊಂದು ಹೊಸ ಸಂಶೋಧನೆ ನಡೆಯುತ್ತಿದ್ದು ಸದ್ಯಕ್ಕೆ ಅಲಂಕಾರಿಕ ಉತ್ಪನ್ನಗಳನ್ನು ತಯಾರು ಮಾಡಲಾಗಿದೆ. ಪೆನ್ ಸ್ಟ್ಯಾಂಡ್, ಚಂದದ ಬುಟ್ಟಿ, ದಾರದ ಎಳೆ ತಯಾರಿಸಲಾಗಿದೆ. 

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸಣ್ಣ ಪಾಪಮ್ಮ ಕೆಜೆ ಅಖಿಲ ಭಾರತ ಸಮನ್ವಯ ಸಂಶೋಧನೆ ಇವರು ಈ ಬಗ್ಗೆ ಪ್ರಯತ್ನ ನಡೆಸಿದ್ದು ಮುಂದಿನ ದಿನಗಳಲ್ಲಿ ಬಟ್ಟೆಯನ್ನು ಕೂಡ ತಯಾರು ಮಾಡಿ ಉಪಯೋಗಿಸುವಂತಹ ಪ್ರಯತ್ನಗಳು ನಡೆಯಬೇಕಿದೆ ಎಂದರು. ಇದರಿಂದ ಬಾಳೆ ನಾರಿನ ಉತ್ಪನ್ನಗಳು ಹೆಚ್ಚು ಜನರನ್ನು ತಲುಪುವಂತಾಗುತ್ತದೆ ಎಂಬುದು ಅವರ ಅಭಿಪ್ರಾಯ.


Post a Comment

0 Comments