Hot Posts

6/recent/ticker-posts

ಇಂದು (ಫೆ 9) ಜಡ್ಡಿಗದ್ದೆಯಲ್ಲಿ ಶಾಸಕರಿಗೆ ಅಭಿನಂದನಾ ಸಮಾರಂಭ

         

ಶಿರಸಿ: ಶುಕ್ರವಾರದಂದು ಕೊಡ್ನಗದ್ದೆ ಪಂಚಾಯತದ ಸಮಸ್ತ ಊರ ನಾಗರಿಕರಿಂದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವು ಶ್ರೀ ಮಹಾಗಣಪತಿ ದೇವಸ್ಥಾನದ ಎದುರುಗಡೆಯ ಆವರಣ, ಜಡ್ಡಿಗದ್ದೆಯಲ್ಲಿ ನಡೆಯಲಿದೆ. ಶ್ರೀ ಬಾಲಾಜಿ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ಸ್ಥಳ ಶ್ರೀ ಮಹಾಗಣಪತಿ ದೇವಸ್ಥಾನದವರೆಗೆ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಡೊಳ್ಳು ಕುಣಿತ ಈಶ ಗೌಡ ತಂಡದವರಿ೦ದ ಹಾಗೂ ದಮಾಮಿ ಕುಣಿತ ಶ್ರೀ ಸಿದ್ಧಿವಿನಾಯಕ ಕಲಾ ಸಂಘ ಗದ್ದೆಹಳ್ಳಿ ರವರಿಂದ ಮೆರವಣಿಗೆ ಪ್ರಾರಂಭಗೊಳ್ಳುವುದು.

 ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರ ಶಾಸಕ ಭೀಮಣ್ಣ ಟಿ. ನಾಯ್ಕ ರವರು ಆಗಮಿಸಲಿದ್ದಾರೆ. ಮಾಬ್ಲೇಶ್ವರ ಎನ್. ಭಟ್ಟ ತೋಟಿಮನೆ, ಉಪಾಧ್ಯಕ್ಷರು, ಟಿ. ಎಸ್. ಎಸ್. ಸೊಸೈಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜಗದೀಶ ಗೌಡ, ಕಾಂಗ್ರೆಸ್ ಬ್ಲಾಕ್, ಅಧ್ಯಕ್ಷರು, ಜಿ. ಎನ್. ಹೆಗಡೆ ಮುರೇಗಾರ, ಮಾಜಿ ಜಿ. ಪಂ. ಸದಸ್ಯರು, ಎಸ್. ಕೆ. ಭಾಗವತ, ಅಧ್ಯಕ್ಷರು, ಉಪಸಮಿತಿ ಎಮ್. ಎಮ್. ಕಲಾ ಮತ್ತು ವಿಜ್ಞಾನ ಕಾಲೇಜು, ಎನ್. ಎಸ್. ಹೆಗಡೆ, ಕೋಟಿಕೊಪ್ಪ, ಅಧ್ಯಕ್ಷರು, ವಾನಳ್ಳಿ ಸೊಸೈಟಿ, ವಿ. ಆರ್. ಹೆಗಡೆ ಮನ್ಮನೆ, ಉಪಾಧ್ಯಕ್ಷರು, ವಾನಳ್ಳಿ ಸೊಸೈಟಿ, ಮಂಜುನಾಥ ಜಿ. ಭಟ್, ಕಾಂಗ್ರೆಸ್ ಘಟಕಾಧ್ಯಕ್ಷರು, ಜಡ್ಡಿಗದ್ದೆ, ಎಸ್. ಎಸ್. ಭಟ್, ಕಾಂಗ್ರೆಸ್ ಮುಖಂಡರು, ಆಶಾ ಮಂಜುನಾಥ ಗೌಡ, ಮಾಜಿ ಗ್ರಾ. ಪಂ. ಅಧ್ಯಕ್ಷರು, ರಾಘವೇಂದ್ರ ಹೆಗಡೆ, ಅಧ್ಯಕ್ಷರು, ಕೊಡ್ನಗದ್ದೆ ಗ್ರಾಮ ಪಂಚಾಯತ, ಶ್ರೀನಿವಾಸ ಜೆ. ನಾಯ್ಕ, ಅಧ್ಯಕ್ಷರು, ಉ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಇವರುಗಳ ಗೌರವ ಉಪಸ್ಥಿತಿ ಇರಲಿದೆ.

 ಹಾಗೂ ಈ ಕಾರ್ಯಕ್ರಮದಲ್ಲಿ ಹಲವು ಸಾಧಕರಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ. ಈ ಅಭಿನಂದನಾ ಕಾರ್ಯಕ್ರಮಕ್ಕೆ ಜಡ್ಡಿಗದ್ದೆ (ಕೊಡ್ನಗದ್ದೆ) ಪಂಚಾಯತ ವ್ಯಾಪ್ತಿಯ ಗೌರವಾನ್ವಿತ ಮುಖಂಡರು, ಸಮಸ್ತರ ಊರನಾಗರಿಕರು ಕಾರ್ಯಕ್ರಮದಲ್ಲಿ ಭಾಗಹಿಸಿ ಚೆಂದಗಾಣಿಸಿಕೊಡಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Post a Comment

0 Comments