Hot Posts

6/recent/ticker-posts

ಬಂತು ಕಾಯಿಮೀನು… ಇದೇನಿದು ಹೊಸ ಮೀನು ಅಂತೀರಾ?

ಕಾಯಿಮೀನು ಹೆಸರು ಕೇಳಿದ್ದು ಕೂಡಲೇ ಇದೇನಪ್ಪ ಮೀನಿನಲ್ಲಿ ಹೊಸ ಜಾತಿ ಬಂತೆ ಎಂದು ಹಲವರಿಗೆ ಪ್ರಶ್ನಾರ್ಥಕವಾಗಬಹುದು. ಅಲ್ಲ ಇದು ತೆಂಗಿನ ಕಾಯಿಯಿಂದ ಮಾಡಿದಂತಹ ಮೀನಿನ ಕಲಾಕೃತಿ. ತೆಂಗಿನಕಾಯಲ್ಲಿ ಸಣ್ಣ ಕಾಯಿಯನ್ನ ತೆಗೆದುಕೊಂಡು ಅದಕ್ಕೆ ಕೆತ್ತನೆಮಾಡಿ,ಬಣ್ಣವನ್ನು ಹಚ್ಚಿ ಎರಡು ಗೆರೆಟೆ ಚೂರಿನ ರೆಕ್ಕೆ ಪುಕ್ಕವನ್ನು ಹಚ್ಚಿ ಮಾಡಿದಂತಹ,ಕಾಯಿಯ ಕಣ್ಣುಗಳನ್ನು ಮೀನಿನ ಕಣ್ಣಾಗಿ ಮಾಡಿದ ನೈಸರ್ಗಿಕ ಕಲಾಕೃತಿ ಇದಾಗಿದೆ. ತೆಂಗಿನಕಾಯಿಯ ದರ ಪಾತಾಳಕ್ಕೆ ತಲುಪಿದಂತಹ ಸಂದರ್ಭದಲ್ಲಿ ಕೈಯಿಂದ ಇಂತಹ ಕಲಾಕೃತಿಯನ್ನು ತಯಾರಿಸಬಹುದು ಎಂದು ತೋರಿಸಿಕೊಟ್ಟವರು ಕದಂಬ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಕಾಯಿಯ ಮಧ್ಯದಲ್ಲಿ ಇರುವಂತಹ ಸಂತೋಷ್ ಗಂಗಾಧರ್ ಹೆಗಡೆ ಹುಳ್ಸೇಮಕ್ಕಿ, ಕೋಳೀಗಾರ ಇವರು ಉತ್ತರ ಕನ್ನಡದ ಕೃಷಿಕರಿಗೆ ಕೃಷಿಯ ಜೊತೆಗೆ ಉಪ ಕೃಷಿ ಉತ್ಪನ್ನಗಳ ಆದಾಯದ ಅವಶ್ಯಕತೆ ಖಂಡಿತವಾಗಿಯೂ ಇದೆ. ಅದರಲ್ಲಿಯೂ ಉತ್ತರ ಕನ್ನಡದ ಕೃಷಿ ಉತ್ಪನ್ನಗಳನ್ನ ಬಳಸಿ, ಕೃಷಿ ಉತ್ಪನ್ನಗಳ ವ್ಯರ್ಥವಾಗುವಂತಹ ಭಾಗವನ್ನು ಬಳಸಿ ಅದರಿಂದ ಕಲಾ ಕೃತಿಯನ್ನು ತಯಾರಿಸಿ ಮಾರಾಟ ಮಾಡಿದರೆ ಹೆಚ್ಚಿನ ಆದಾಯ ಎಂಬ ಅಭಿಪ್ರಾಯ ಕೆಲವು ತಜ್ಞರದ್ದು. ಇದರಂತೆ ಚಾಲಿ ಅಡಿಕೆ, ಕೆಂಪು ಅಡಿಕೆ ಇವೆಲ್ಲ ಇವು ಎರಡನ್ನು ಬಳಸಿ ವಾಲ ಪ್ಲೇಟಗಳು, ಅಡಿಕೆಯ ಹಾಳೆಯ ಮೇಲೆ ನೈಸರ್ಗಿಕ ಚಾಲಿ ಅಡಿಕೆ ಕೆಂಪು ಬಣ್ಣದ ಕೆಂಪು ಅಡಿಕೆಯನ್ನ ಉಪಯೋಗಿಸಿ ಪರಿಸರ ಸ್ನೇಹಿ ಕಲಾಕೃತಿಗಳನ್ನು ತಯಾರಿಸಬಹುದಾಗಿದೆ. ಅಲ್ಲದೆ ತೆಂಗಿನ ಕಾಯಿಯ ಗೆರೆಟೆ ಸಿಪ್ಪೆಗಳನ್ನ ಬಳಸಿ ಸುಂದರವಾಗಿ ಕಾಣುವಂತಹ ಕಲಾ ಕುಸುರಿಯನ್ನು ತಯಾರಿಸಬಹುದಾಗಿದೆ ಎನ್ನುವುದು ಈ ಮೇಲಿನ ಉದಾಹರಣೆಯಿಂದ ಮನದಟ್ಟಾಗುವಂತಿದೆ.

ಡಾ. ರವಿಕಿರಣ ಪಟವರ್ಧನ್

Post a Comment

0 Comments