Hot Posts

6/recent/ticker-posts

ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಂದ ಶ್ರಮದಾನ: ಬಸ್ ತಂಗುದಾಣ ದೇವಸ್ಥಾನದ ಆವರಣ ಕ್ಲೀನ್ ಕ್ಲೀನ್

ಶಿರಸಿ: ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಇದರ ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿ 3 ಬಸ್ ತಂಗುದಾಣ ಅವರಣ ಹಾಗೂ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಶಿವಾಗಾಂವ ಮಠ ಇದರ ಆವರಣವನ್ನು ಸ್ವಚ್ಛಗೊಳಿಸಿದರು. ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ವರೆಗೆ ಹಾಗೂ ಮೂರು ಪ್ರಯಾಣಿಕರ ತಂಗುದಾಣಗಳ ಸುತ್ತ ಸ್ವಚ್ಚತೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೆಲಸವನ್ನು ಮೆಚ್ಚಿ ನಿವೃತ್ತ ಶಿಕ್ಷಕಿ ಉಮಾ ಹೆಗಡೆಯವರು ತಮ್ಮ ಮನೆಗೆ ಕರೆಸಿ ಉಪಹಾರ ನೀಡಿ ಸತ್ಕರಿಸಿದರು. ಗ್ರಾಮ ಪಂಚಾಯತ ಹೆಗಡೆಕಟ್ಟಾ ಕಸವನ್ನು ವಿಲೇವಾರಿ ಮಾಡುವಲ್ಲಿ ಸಹಕರಿಸಿದರು. ವಾಹನ ಕಳಿಸಿ ಸಂಗ್ರಹಿಸಿದ ಕಸವನ್ನು ವಿಲೇವಾರಿ ಘಟಕಕ್ಕೆ ಸಾಗಿಸಿ ಮೆಚ್ಚುಗೆಗೆ ಪಾತ್ರರಾದರು. ಪುಟ್ಟ ಮಕ್ಕಳೂ ಸಹ ಕೈ ಜೋಡಿಸಿದ್ದು ವಿಶೇಷವೆನಿಸಿತು

Post a Comment

0 Comments