Hot Posts

6/recent/ticker-posts

ಹೊಸರುಚಿ "ಹಲಸವಲಕ್ಕಿ"

ಇದು ಹೊಸರುಚಿ "ಹಲಸವಲಕ್ಕಿ"

ಹಲಸಿನಕಾಯಿ ಹೋಳು(ಸಣ್ಣಗೆ ಕತ್ತರಿಸಿ)-1ಕಪ್

ದಪ್ಪ ಅವಲಕ್ಕಿ 1/2 ಕಪ್

ನೀರುಳ್ಳಿ 1

ಹಸಿಮೆಣಸು 2  

ಕ್ಯಾರಟ್ ತುರಿ - 1/4 ಕಪ್

ಕಾಯಿತುರಿ -1/4 ಕಪ್

ನಿಂಬೆರಸ

ಉಪ್ಪು

ಒಗ್ಗರಣೆಗೆ ತೆಂಗಿನ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಸಿನ.

ಅವಲಕ್ಕಿಯನ್ನು ತೊಳೆದು ನೀರುಬಸಿದು ಇಡಿ.

ನೀರುಳ್ಳಿ, ಹಸಿಮೆಣಸು ಕತ್ತರಿಸಿ ಇಡಿ.

ಒಗ್ಗರಣೆ ತಯಾರಿಸಿ ಕರಿಬೇವು, ಅರಸಿನ , ಹಲಸಿನಕಾಯಿ, ಉಪ್ಪು, ಸ್ವಲ್ಪ ನೀರು ಸೇರಿಸಿ ಮುಚ್ಚಿ ಬೇಯಿಸಿ.

ಬೆಂದ ಮೇಲೆ ಉಳಿದೆಲ್ಲ ವಸ್ತುಗಳನ್ನೂ ಸೇರಿಸಿ ಬೆರೆಸಿ.

ಮೇಲಿನ ರೆಸಿಪಿ & ಪಟ : ನಳಿನಿ ಮಾಯಿಲಂಕೋಡಿ

Post a Comment

0 Comments