Hot Posts

6/recent/ticker-posts

ಚಳಿಗೆ ಉಪ್ಪು ಹುಳಿ ಖಾರ ಅಡುಗೆ ಬೇಕು ಅನಿಸುತ್ತೆ

ಹಾಯ್ ನಾನು ಮಾಲತಿ, ಈಗ ಚಳಿಗಾಲ ಅಲ್ವಾ ಬಾಯಿಗೆ ಉಪ್ಪು ಹುಳಿ ಖಾರ ಇರುವ ಅಡಿಗೆ ಇದ್ರೆ ಅನ್ಸತ್ತೆ ಅದ್ಕೆ ತುಂಬಾ ಈಸಿ ಆಗಿರೋ ಹುಣಸೆ ಹಣ್ಣಿನ ಕೈ ಗೊಜ್ಜು ಮಾಡೋದನ್ನ ಹೇಳ್ತಿನಿ ಹುಣಸೆ ಹಣ್ಣನ್ನು ಚೆನ್ನಾಗಿ ತೊಳೆದು ಬಿಸಿನೀರಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ಟು ಚೆನ್ನಾಗಿ ಕಿವುಚಿ ರಸ ಅಷ್ಟೇ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ರುಚಿಗೆ ಬೇಕಷ್ಟು ಉಪ್ಪು ಹಾಕಿ ಒಂದು ಕುಟ್ಟನಿಯಲ್ಲಿ ಜೀರಿಗೆ ಹಾಫ್ ಸ್ಪೂನ್ ಕಾಲು ಸ್ಪೂನ್ ಕಾಳುಮೆಣಸು,3 ಬೆಳ್ಳುಳ್ಳಿ ಖಾರಕ್ಕೆ ಬೇಕಷ್ಟು ಹಸಿ ಮೆಣಸು ಅಥವಾ ಸಣ್ಣ ಮೆಣಸು ಇವಿಷ್ಟನ್ನು ಚೆನ್ನಾಗಿ ಕುಟ್ಟಿ ಹುಣಸೆ ರಸಕ್ಕೆ ಸೇರಿಸಿ ಕುತ್ತುoಬ್ರಿ ಸೊಪ್ಪು ಬೇವಿನಸೊಪ್ಪು ಸಣ್ಣದಾಗಿ ಕಟ್ ಮಾಡಿ ಹಾಕಿದರೆ ಗಮ್ಮತ್ತಾದ ಹುಣಸೆ ಕೈಗೊಜ್ಜು ರೆಡಿ

ನೋಡಿ ಯಾವದೇ ಒಗ್ಗರಣೆ ಇಲ್ಲ, ಕಾಯಿ ಹಾಕೋದು ಇಲ್ಲಾ ತುಂಬಾ ಸುಲಭದಲ್ಲಿ ಮಾಡಬಹುದು 😍🥰😋

Post a Comment

0 Comments