ಶಿರಸಿ: ದಿನಾಂಕ 10-11-2023 ರಂದು ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಉಪನಿರ್ದೇಶಕರ ಕಾರ್ಯಲಯ ,ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ,ರಾಠೋಡ ಮಾರ್ಷಲ್ ಆರ್ಟ್ಸ ಆಂಡ್ ಸಿಲ್ಕೂö್ಯನಿಯನ್ ಉ.ಕ ,ಅಕ್ವಾ ರಾ ಕೊಂಬಾಟ್ ಬುಡೋಕಾನ್ ಕರಾಟೆ ಅಕಾಡಮಿ, ದಾಂಡೇಲಿ ಇವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಿದ್ಯಾರ್ಥಿಗಳು ಭಾಗವಹಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. 8 ನೇ ತರಗತಿಯ ಕೆ ಎಸ್ ಜೀವನ್ ಮತ್ತು 6 ನೇ ತರಗತಿಯ ಸಾಧನಾ ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ವರ್ಗದ ಸಿಂಚನಾ ಹೆಗಡೆ, ಪ್ರತೀಕ್ ಭಟ್, 7 ನೇ ವರ್ಗದ ಕಿಶನ್ ಗೌಳಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 8ನೇ ವರ್ಗದ ಸಾಧನಾ ಆಚಾರಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರ ಸಾಧನೆಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ
0 Comments