Hot Posts

6/recent/ticker-posts

ಶಿರಸಿ ಲಯನ್ಸ ಕ್ಲಬ್ ಗೆ ಲಯನ್ಸ ಪ್ರಾದೇಶಿಕ ಅಧಿಕಾರಿ ಹಾಗೂ ಲಯನ್ಸ ವಲಯ ಅಧಿಕಾರಿ ಅಧಿಕೃತ ಭೇಟಿ:

ಶಿರಸಿ: ಸೆ.1 ರಂದು ಲಯನ್ಸ ಪ್ರಾದೇಶಿಕ ಅಧಿಕಾರಿ ಲಯನ್ ಐಶ್ವರ್ಯ ಮಾಸೂರ್ಕರ್ ಹಾಗೂ ಲಯನ್ಸ ವಲಯ ಅಧಿಕಾರಿ ಲಯನ್ ವಿನಯಾ ಹೆಗಡೆ ಇವರು ಲಯನ್ಸ ಕ್ಲಬ್ ಶಿರಸಿಗೆ ಅಧಿಕೃತ ಭೇಟಿ ನೀಡಿದರು. ಶ್ರಾವಣ ಶುಕ್ರವಾರದ ಶುಭ ದಿನದಂದು ಲಕ್ಷ್ಮಿ ಪೂಜೆಯೊಂದಿಗೆ ಪ್ರಾರಂಭವಾಯಿತು. ಲಯನ್ಸ ಕ್ಲಬ್ ಶಿರಸಿ ಅಧ್ಯಕ್ಷರಾದ ಲಯನ್ ಅಶೋಕ ಹೆಗಡೆ ಎಮ್. ಜೆ. ಎಫ ಇವರು ಸ್ವಾಗತಿಸಿದರು. ನಂತರ ಲಯನ್ಸ ಕ್ಲಬ್ ಶಿರಸಿ, ಲಿಯೊ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶ್ರೀನಿಕೇತನದ ಈವರೆಗಿನ ಸೇವಾ ಕಾರ್ಯಗಳ ವರದಿ ವಾಚನ ಮಾಡಲಾಯಿತು. ಲಯನ್ ಐಶ್ವರ್ಯ ಮಾಸೂರ್ಕರ ಹಾಗೂ ಲಯನ್ ವಿನಯಾ ಹೆಗಡೆ ಇವರು ಕ್ಲಬ್ ನ ಸೇವಾಕಾರ್ಯಗಳನ್ನು ಅಭಿನಂದಿಸಿದರು. ಹೊಸ ಲಯನ್ ಸದಸ್ಯರನ್ನು ಸ್ವಾಗತಿಸಲಾಯಿತು. 

ಲಯನ್ ಜ್ಯೋತಿ ಅಶ್ವಥ ಹೆಗಡೆ, ಕಾರ್ಯದರ್ಶಿ ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಲಯನ್ ಎಮ್. ಐ. ಹೆಗಡೆ ಮತ್ತು ಲಯನ್ ಮಂಗಲಾ ಹೆಗಡೆ ಅತ್ತ್ಯುತ್ತಮವಾಗಿ ನಿರ್ವಹಿಸಿದರು. ನಂತರ ಅಧ್ಯಕ್ಷರಾದ ಲಯನ್ ಅಶೋಕ ಹೆಗಡೆ ಮತ್ತು ಪತ್ನಿ ಲಯನ್ ಜ್ಯೋತಿ ಅಶೋಕ ಹೆಗಡೆ ಇವರು ಲಯನ್ ಸದಸ್ಯರನ್ನು ಸನ್ಮಾನಿಸಿ, ಲಯನ್ಸ ಮಹಿಳಾ ಸದಸ್ಯರಿಗೆ ಉಡಿ ತುಂಬಿದರು. ಲಯನ್ಸ ಭಗಿನಿಯರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.

Post a Comment

0 Comments