Hot Posts

6/recent/ticker-posts

ಕೃಷ್ಣ ನಾಯ್ಕ ರಿಗೆ 2023ರ ಉತ್ತಮ ಶಿಕ್ಷಕ ಪ್ರಶಸ್ತಿ

ಶಿರಸಿ: ಶ್ರೀ ಗಜಾನನ ಪ್ರೌಢಶಾಲೆಯ ಗಣಿತ ವಿಜ್ಞಾನ ಸಹ ಶಿಕ್ಷಕರಾದ ಕೃಷ್ಣ ಎನ್ ನಾಯ್ಕ ಅವರಿಗೆ 2023ರ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿನಾಂಕ 17 ಭಾನುವಾರ ರೋಟರಿ ಬೆಂಗಳೂರು ಎಬಿಲಿಟಿ ಅವರು ನೀಡುವ ದ ಅನ್ ಯುಸಿಂಗ್ ಹೀರೋ ಅವಾರ್ಡ್ ಫಾರ್ ದ ಬೆಸ್ಟ್ ಟೀಚರ್ (THE UNSUNG HERO AWARD FOR THE BEST TEACHER)ಸನ್ಮಾನವನ್ನು ಕೃಷ್ಣ ನಾಯ್ಕ ಅವರಿಗೆ ನೀಡಲಾಯಿತು. ಸಂದರ್ಭದಲ್ಲಿ ರೋಟೆರಿಯನ್ ಶ್ರೀಧರ ಹೆಗಡೆ ಹಾಗೂ ಸಮಸ್ತ ರೋಟರಿ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಮತ್ತು ನಿರಂತರವಾಗಿ 23 ವರ್ಷಗಳಿಂದ ಶಿಕ್ಷಣ ಮತ್ತು ಪುನಶ್ಚೇತನ ತರಬೇತಿಯನ್ನು ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ವರ್ಷ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕೃಷ್ಣ ನಾಯ್ಕ ಅವರನ್ನು ಪರಿಗಣಿಸಲಾಗಿದೆ. ಈ ಸಂದರ್ಭದಲ್ಲಿ ನಾಯ್ಕ ಅವರು ಅಭಿಪ್ರಾಯ ವ್ಯಕ್ತಪಡಿಸಿ, ನನ್ನ ಜೀವನದ ಸುವರ್ಣ ಸಂಭ್ರಮ ಎಂದೇ ಪರಿಗಣಿಸುತ್ತೇನೆ. ಈ ಒಂದು ಸದಾವಕಾಶ ಕಲ್ಪಿಸಿಕೊಟ್ಟ ನನ್ನೆಲ್ಲಾ ವಿದ್ಯಾರ್ಥಿಗಳಿಗೆ ಈ ಗೌರವವನ್ನು ಸಲ್ಲಿಸುತ್ತೇನೆ. ನನಗೆ ಸಂದ ಈ ಗೌರವ ಮಕ್ಕಳಿಗೆ ಸಲ್ಲಬೇಕು ಎಂದಿದ್ದಾರೆ.

Post a Comment

0 Comments