ಶಿರಸಿ:122 ವರ್ಷದ ಹಿಂದೆ ಕಂಡಿರುವಂತ ಬರಗಾಲ ನಮ್ಮಲ್ಲಿ ಈ ವರ್ಷ ಕಂಡು ಬಂದಿದೆ ಎಂದು ಒಂದು ವರದಿಯನ್ನು ಓದಿದ್ದೇನೆ. ನಿಜ ಇನ್ನೂ ಏನಾದರೂ ಮಳೆ ಬಾರದೇ ಹೋದರೆ ಅಕ್ಷರ ಶಹ ಜನ ಹಸಿವಿನಿಂದ ಬಳಲುವ, ಹಾಹಾಕರ ಪಡುವ ಸ್ತಿತಿ ಬರುವುದಂತು ನಿಜ. ಊಟಕ್ಕೆ ಬಿಡಿ ಕುಡಿಯುವ ನೀರಿಗೂ ತುಟ್ಟಿಯಾಗುವ ಸಾಧ್ಯತೆಯೇ ತುಂಬಾ ಜಾಸ್ತಿ. ಇದರ ಮಧ್ಯದಲ್ಲಿ ಸರಕಾರದಿಂದ 'ಬರಗಾಲ ಪೀಡಿತ ತಾಲೂಕು ಘೋಷಣೆ ಶಿರಸಿ ಸಿದ್ದಾಪುರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವುದು ತುಂಬಾ ಅವಶ್ಯಕ. ಮತ್ತು ಘೋಷಣೆ ಮಾಡಿದ ಮೇಲೆ ಕೇವಲ RTC ಇದ್ದವರಿಗೆ ಮಾತ್ರ ಪರಿಹಾರ ಕೊಡುವುದು, ಇಲ್ಲಾ ಬೆಳೆ ನಾಶದ ಪರಿಹಾರ ಮಾತ್ರ ಕೊಟ್ಟರೆ ಸಾಲದು. ನಮ್ಮಲ್ಲಿ ಅತಿಕ್ರಮಣ ದಾರರು ತುಂಬಾ ಜಾಸ್ತಿ ಇದ್ದಾರೆ. ಈ ಪರಿಹಾರದ ಪಾಲನುಭವಿಗಳ ಲಿಸ್ಟ್ ಅಲ್ಲಿ ಅತಿಕ್ರಮಣ ದಾರರು ಬರುವುದೇ ಇಲ್ಲ. ಆದ್ದರಿಂದ ಬೆಳೆ ನಾಶ ಪರಿಹಾರದ ಜೊತೆಗೆ ಪ್ರತಿಯೊಬ್ಬ ನಾಗರೀಕರನ್ನು ಮನುಷ್ಯರು, ಅಲ್ಲಿರುವ ಅತಿಕ್ರಮಣ ದಾರರು ಮನುಷ್ಯರು ಎಂದು ಪರಿಗಣಿಸಿ ಅವರಿಗೂ ಬದುಕುವ ರೀತಿಯಲ್ಲಿ ಅನುಕೂಲ ಮಾಡಿ ಕೊಡಬೇಕೆಂದು ಶಾಸಕರಿಗೆ ಹಿತೇಂದ್ರ ನಾಯ್ಕ ಸಲಹೆ ನೀಡಿದ್ದಾರೆ.
ಕರೋನ ಸಂಕಷ್ಟದಿಂದ ತತ್ತರಿಸಿ ಹೋಗಿ ಪಟ್ಟಣದಿಂದ ಹಳ್ಳಿ ಸೇರಿದ ಜನರಿಗೆ ಮತ್ತೊಂದು ಸಂಕಷ್ಟ ಬರಗಾಲದ ಎದುರಾಗಿದೆ. ಈ ಬಾರಿಯೂ ಕಾರೋನ ಕಾಲದಲ್ಲಿ ಆದ ನಿರ್ಲಕ್ಷ ಬೇಡ. ಆದಷ್ಟು ಬೇಗ ನಮ್ಮ ತಾಲೂಕು ಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದರ ಜೊತೆಗೆ ಮುಂದೆ ಎದುರಾಗಬಹುದಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಳ್ಳುವುದು ಉತ್ತಮ ಎಂದು ಅವರು ಶಾಸಕರಿಗೆ ಹಿತೇಂದ್ರ ಸಲಹೆ ನೀಡಿದ್ದಾರೆ.
0 Comments