Hot Posts

6/recent/ticker-posts

ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಮಿಯಾರ್ಡ್ಸ ಚಂದನ ವಿದ್ಯಾರ್ಥಿಗಳು:

ಶಿರಸಿ: ದಿನಾಂಕ 01-09-2023 ರಂದು ಶಿರಸಿಯ ಜೆ ಎಂ ಜೆ ಶಾಲೆಯಲ್ಲಿ ನಡೆದ ಶಿರಸಿ ತಾಲುಕಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದ ಚೆಸ್ ಮತ್ತು ಯೋಗ ವಿಭಾಗದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ 6 ನೇ ವರ್ಗದ ವಿದ್ಯಾರ್ಥಿಗಳಾದ ಸಾನಿಕಾ ಹೆಗಡೆ ಮತ್ತು ಸಾಧನಾ ಗೌಡ (ಯೋಗ), 7ನೇ ವರ್ಗದ ಆಯುಷ್ ನಾವಡಾ (ಚೆಸ್), ಹಾಗೂ 8 ನೇ ವರ್ಗದ ವಿದ್ಯಾರ್ಥಿಗಳಿಗೆ ನಡೆಸುವ ಟಿ ಜಿ ಟಿ ವಿಭಾಗದ ಚೆಸ್ ಸ್ಪರ್ಧೆಯಲ್ಲಿ 8 ನೇ ವರ್ಗದ ಸಾತ್ವಿಕ್ ಪೂಜಾರಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕೀಯರ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

Post a Comment

0 Comments