Hot Posts

6/recent/ticker-posts

ಸಮಾಜದ ಒಳಿತಿನ ಕನಸು ನನಸಾಗಿಸುವತ್ತ "ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್" ದಾಪುಗಾಲು

 
ಶಿರಸಿ: ಇತ್ತೀಚೆಗಷ್ಟೇ ಆರಂಭವಾಗಿರುವ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಮಾಜ ಸೇವೆಯತ್ತ ದಾಪುಗಾಲು ಹಾಕುತ್ತಿದೆ. ನನ್ನಲ್ಲಿ ಒಂದು ಕನಸಿದೆ ನನ್ನೂರಿಗೆ ಒಳ್ಳೆಯದು ಮಾಡಬೇಕು, ನನ್ನ ತಾಲೂಕು ನನ್ನ ಜಿಲ್ಲೆ ಯಾವುದೇ ಸೌಲಭ್ಯಗಳಿಂದ ವಂಚಿತ ಆಗಬಾರದು ಎನ್ನುವ ಉದಾತ್ತ ಉದ್ದೇಶ ಅನಂತಮೂರ್ತಿ ಹೆಗಡೆ ಅವರಲ್ಲಿ ಬಂದಿದ್ದೇ "ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್" ಸ್ಥಾಪನೆಗೆ ಕಾರಣವಾಯಿತು. ಸಮಾಜದಲ್ಲಿ ಸೌಲಭ್ಯಗಳಿಂದ ವಂಚಿತವಾದ ಎಷ್ಟೋ ಸಂಸ್ಥೆಗಳಿವೆ, ಸೌಲಭ್ಯಗಳಿಂದ ವಂಚಿತರಾದ ಅದೆಷ್ಟೋ ಜನರಿದ್ದಾರೆ, ಮೂಲಭೂತ ಶಿಕ್ಷಣ ಪಡೆಯಲಿಕ್ಕೂ ಆಗದಂತಹ ಸಮಾಜ ಇನ್ನೂ ಕಾಣ ಸಿಗುತ್ತದೆ. ಇವೆಲ್ಲ ನೋಡಿ ಮರುಗಿದ ಅನಂತಮೂರ್ತಿ ಹೆಗಡೆ ಏನನ್ನಾದರೂ ಮಾಡಲೇಬೇಕು ಎನ್ನುವ ಹಠ ಹೊತ್ತು ಸಾಗುತ್ತಾರೆ. ಈಗ ಅವರ ಕನಸಿಗೆ ಟ್ರಸ್ಟ್ ಬಲ ತುಂಬಿದೆ. 

ಸಮಾಜದ ಒಳಿತೇ ನನ್ನ ತೃಪ್ತಿ: ಅನಂತಮೂರ್ತಿ ಹೆಗಡೆ

ಜನರ ಕಷ್ಟಗಳನ್ನು ನೋಡಿ ಅಡ್ಡ ಮುಖ ಹಾಕುವವರೇ ಹೆಚ್ಚು, ಇವೆಲ್ಲ ಇರುವಂತಹುದೇ ನಾನೊಬ್ಬ ಎಷ್ಟು ಅಂತ ಸುಧಾರಿಸಲಿಕ್ಕೆ ಸಾಧ್ಯ ಎಂದುಕೊಂಡು ಮರೆತು ಬಿಡುವವರೇ ಹೆಚ್ಚು. ಆದರೆ ಅನಂತಮೂರ್ತಿ ಹೆಗಡೆ ಈ ವಿಷಯಕ್ಕೆ ಅಪವಾದವಾಗಿ ಕಾಣುತ್ತಾರೆ. ತಮ್ಮ ಹೋರಾಟ ನಿಲ್ಲಿಸಲಿಲ್ಲ ತನ್ನೂರಿಗೆ ಹಾಗೂ ನನ್ನ ಸಮಾಜಕ್ಕೆ ಕಿಂಚಿತ್ತಾದರೂ ಪ್ರತಿ ಸೇವೆಯನ್ನು ನೀಡಬೇಕು ಎಂಬ ಧ್ಯೇಯೋದ್ದೇಶದ ಗಟ್ಟಿ ನಿರ್ಧಾರ ಮಾಡಿ ಮುಂದುವರಿಯುತ್ತಿದ್ದಾರೆ. ಇವರ ಉದ್ದೇಶ ಶಿಕ್ಷಣ, ಆರೋಗ್ಯ, ಆಹಾರ ಹಾಗೂ ಸೂರು ಒದಗಿಸಿಕೊಡಬೇಕು ಎನ್ನುವುದು. ಈ ಉದ್ದೇಶ ಸಾಧನೆ ಕಾರಣಕ್ಕಾಗಿ ಈಗಾಗಲೇ ಹಲವು ಸರಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಫಿಲ್ಟರ್ ಗಳನ್ನು, ಕಿವುಡ ಮೂಕರ ಶಾಲೆಗೆ ಫ್ರಿಜ್‌ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಇತ್ತೀಚೆಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಜನರಿಗೆ ಸಹಕಾರಿಯಾಗಲಿ ಎಂದು ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿಯೂ ಆಗಿದೆ.

 
 ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಉದ್ಘಟನೆ ಚಿತ್ರ 

ದುಡಿಮೆ ಇದೆ ದುಡಿಮೆಯ ಒಂದು ಪಾಲು ತ್ಯಾಗಕ್ಕೂ ಮೀಸಲು, ಬಡವರು ಹಸಿವಿನಿಂದ ಬಳಲಬಾರದು, ಈ ವಿಚಾರಗಳಲ್ಲಿ ತನ್ನಿಂದ ಏನಾದರೂ ಕಿಂಚಿತ್ ಸಹಾಯವಾದರೆ ಅದೇ ತನಗೆ ತೃಪ್ತಿ ಎನ್ನುವಾಗ ಅನಂತ ಮೂರ್ತಿ ಹೆಗಡೆ ಭಾವುಕರಾಗುತ್ತಾರೆ. ಈಗಾಗಲೇ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ಚಂದನ ಶಾಲೆ ನರೇಬೈಲ್, ಮಾರಿಕಾಂಬಾ ಸರಕಾರಿ ಪಿಯು ಕಾಲೇಜ್, ಶಿರಸಿ, ಬಂಗಾರೇಶ್ವರ ದೇವಸ್ಥಾನ, ಗುಡ್ಡಾಪುರ, ಕಲ್ಲೇಶ್ವರ ಮಠ, ಅಂಡಗಿ, ಸ. ಹಿ. ಪ್ರಾ. ಶಾಲೆ, ದೊಡ್ನಳ್ಳಿ, ಸ. ಕಿ. ಪ್ರಾ. ಶಾಲೆ, ಹುಸರಿ, ಸ.ಕಿ.ಪ್ರಾ.ಶಾಲೆ, ಭದ್ರಾಪುರ, ಸ. ಹಿ. ಪ್ರಾ. ಶಾಲೆ, ಬಚಗಾಂವ, ಸ. ಹಿ. ಪ್ರಾ. ಶಾಲೆ, ಮಾಡನಗೇರಿ, ಸ. ಹಿ. ಪಾ, ಶಾಲೆ, ಅಂಡಗಿ, ಸ. ಹಿ. ಪ್ರಾ. ಶಾಲೆ ಕಲಕರಡಿ, ಅಲ್‌ಫಲಾ ಶಾಲೆ, ಹುಸರಿ, ಇಕಾ ಶಾಲೆ, ಶಿರಸಿ, ಪ್ರೊಗ್ರೆಸಿವ್ ಜ್ಯೂನಿಯರ್ ಕಾಲೇಜ್, ಶಿರಸಿ ಹಾಗೂ ಕಿರಿಯ ಪ್ರಾಥಮಿಕ ಶಾಲೆ, ಬ್ಯಾಗದ್ದೆ ಮೊದಲಾದ ಶಾಲೆ ಮತ್ತು ಮಠಗಳಿಗೆ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ.

ನನ್ನೂರು, ನನ್ನ ಜಿಲ್ಲೆ, ಸಮೃದ್ಧಿಯಿಂದಿರಲಿ: ಅನಂತಮೂರ್ತಿ ಹೆಗಡೆ 

ಭಕ್ತಿಯಲ್ಲಿ ಇದೆ ಶಕ್ತಿ ಶಿರಸಿಯ ಬ್ಯಾಗದ್ದೆಯಲ್ಲಿ ಶ್ರೀ ಉಮಾಮಹೇಶ್ವರ ಮತ್ತು ಶ್ರೀ ನಾರಾಯಣ ದೇವಸ್ಥಾನ ನಿರ್ಮಾಣ ಕಾರ್ಯವನ್ನು ತಮ್ಮ ಟ್ರಸ್ಟ್ ಮೂಲಕ ಈಗಾಗಲೇ ಪ್ರಾರಂಭಿಸಿದ್ದಾರೆ. ಆ ದೇವರು ಅವರಲ್ಲಿ ಶಕ್ತಿಯನ್ನು ತುಂಬಿದ್ದಾನೆ. ಹೊನ್ನಾವರ ಆಟೋ ಚಾಲಕ ಮಾಲಕರಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಪಾಸಿಂಗ್ ಮಾಡಿಕೊಡುವಂತಹ ಹೊಸ ಕಲ್ಪನೆಗೆ ಮುನ್ನುಡಿ ಹಾಡಿದ್ದಾರೆ. ಅವರ ಮಕ್ಕಳು ಹಣಕಾಸಿನದೇ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೊಡ್ಡ ಕನಸು ಹೊತ್ತಿದ್ದಾರೆ. 

ತಮ್ಮ ಶ್ರಮದ ದುಡಿಮೆಯಿಂದ ಸಮಾಜಕ್ಕೂ ಆಧಾರವಾಗುತ್ತಿರುವ, ಸಮಾಜದ ಒಳಿತಿಗಾಗಿ ಅನೇಕ ಕನಸುಗಳನ್ನು ಹೊತ್ತಿರುವ ಅನಂತಮೂರ್ತಿ ಹೆಗಡೆ ಅವರ ಆಲೋಚನೆ ಸಾಕಾರಗೊಂಡು ಯಶಸ್ವಿಯಾಗಲಿ ಎಂಬುದೇ ಆಶಯ.

Post a Comment

0 Comments