ಸುಟ್ಟ ಗಾಯಗಳಿಗೆ ತಂಪು ಮಾಡಲು ಜೇನು ಉತ್ತಮ ಔಷಧಿ. ಜೇನು ತುಪ್ಪವನ್ನು ನಿರಂತರ ಸೇವಿಸುತ್ತಿದ್ದಲ್ಲಿ ಬುದ್ಧಿ ಚುರುಕಾಗುತ್ತದೆ. ಬೊಜ್ಜು ಕರಗಿಸಲು ಜೇನು ಉತ್ತಮ ಆಹಾರ. ಜಠರ ಸಂಬಂಧಿ ಕಾಯಿಲೆ, ಕರುಕನ ಹುಣ್ಣಿಗೆ ಜೇನು ಸಿದ್ಧೌಷಧ. ಮೂತ್ರಪಿಂಡಗಳ ಬಾವು, ಕಲ್ಲುಗಟ್ಟುವಿಕೆ, ಮೂತ್ರದ್ವಾರವು ಸಣ್ಣದಾಗುವುದು, ಈ ಮುಂತಾದ ರೋಗಗಳಿಗೆ ಜೇನು ತುಪ್ಪದ ಸೇವನೆಯು ಉತ್ತಮ
ಅಷ್ಟಲ್ಲದೇ ಜೇನು ಮೇಣ ಕೂಡ ತುಂಬಾ ಉಪಯುಕ್ತ
ಮೇಣದ ಹಾಳೆ (Comb foundation sheet) ಗಳನ್ನು ತಯಾರಿಸಲು ಬಳಸುತ್ತಾರೆ. ಕೋಲ್ಡ್ ಕ್ರಿಮ್‌ಗಳು, ಲೋಷನ್‌ಗಳು ಮತ್ತು ಮುಲಾಮು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
ಮೇಣದಬತ್ತಿ, ಬಣ್ಣಗಳು, ತಯಾರಿಕೆಯಲ್ಲಿ ಬಳಸುತ್ತಾರೆ ವಾರ್ನಿಷ್ ಮತ್ತು ಪಾಲಿಶ್ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಇನ್ಸುಲೇಟರ್ ಮತ್ತು ಕೀಲು ಎಣ್ಣೆಯಾಗಿ ಬಳಸುತ್ತಾರೆ ಗುಳಿಗೆಗಳ ಹೊರ ಕವಚ ತಯಾರಿಸಲು ಬಳಸುತ್ತಾರೆ ಇಂಕುಗಳು ಮತ್ತು ಡೈಗಳನ್ನು ತಯಾರಿಸಲು ಬಳಸುತ್ತಾರೆ.
ವಿಷಯ ಕೃಪೆ: ಸಾವಯವ ಕೃಷಿ ಸಂಶೋಧನಾ ಕೇಂದ್ರ ಶಿವಮೊಗ್ಗ
0 Comments