Hot Posts

6/recent/ticker-posts

ತೇಪಲಾ ಎಂಬ ಹೊಸ ರೀತಿಯ ಚಪಾತಿ!

ಹಾಯ್ ನಾನು ಮಾಲತಿ, ಇವತ್ತು ಒಂದು ಹೊಸ ರೀತಿಯ ಚಪಾತಿ (ತೇಪ್ಲಾ ) ಮಾಡೋದನ್ನ ಹೇಳ್ತಿನಿ ಮೊದಲು ಒಂದು ಪಾತ್ರೆಗೆ 1 ಬೌಲ್ ಗೋಧಿ ಹಿಟ್ಟು 2 ಸ್ಪೂನ್ ಕಡ್ಲೆ ಹಿಟ್ಟು,1 ಸ್ಪೂನ್ ಮೆಣಸಿನಪುಡಿ ಜೀರಾ, ಕುತ್ತುoಬ್ರಿ ಪುಡಿ ಗರಂಮಸಾಲಾ ಪುಡಿ, ಚಿಟಿಕೆ ಅರಿಶಿನಪುಡಿ ಜೀರಿಗೆ ರುಚಿಗೆ ಬೇಕಷ್ಟು ಉಪ್ಪು ಸಣ್ಣದಾಗಿ ಹೆಚ್ಚಿದ ಹಸಿ ಮೆಣಸು, ನಮಗೆ ಇಷ್ಟವಾದ ಸೊಪ್ಪು ತರಕಾರಿ, ನಾನು ಪಾಲಕ್ ಸೊಪ್ಪು ಹರವೇಸೊಪ್ಪು ಮೂಲಂಗಿಸೊಪ್ಪು ಕುತ್ತುoಬ್ರಿ ಸೊಪ್ಪು ಹಾಗೂ ಕ್ಯಾರಟ್ ಮೂಲಂಗಿ ತುರಿದು ಹಾಕಿದ್ದೇನೆ, 2 ಸ್ಪೂನ್ ಮೊಸರನ್ನು ಇವೆಲ್ಲದರ ಜೊತೆ ಹಾಕಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಬೇಕು.

               
ದೊಡ್ನಳ್ಳಿ ಬೆಲ್ಲ ಸಿಗುತ್ತದೆ
ಈ ವರ್ಷದ ಹೊಸ ಪರಿಮಳ ಭರಿತ ದೊಡ್ನಳ್ಳಿ ಬೆಲ್ಲವನ್ನು ಖರೀದಿಸಲು ಈ ಸಂಖ್ಯೆಗೆ ಸಂಪರ್ಕಿಸಿ:
8431306298 ಮತ್ತು 9483500352

ಇದರ ಜೊತೆ ಟೊಮೆಟೊ ಹಣ್ಣು 2 ಕಟ್ ಮಾಡಿ ಫ್ರೈ ಮಾಡಿ 1 ಈರುಳ್ಳಿ 4 ಎಸಳು ಬೆಳ್ಳುಳ್ಳಿ ಖಾರಕ್ಕೆ ಬೇಕಾದಷ್ಟು ಹಸಿ ಮೆಣಸು ಹಾಕಿ ಫ್ರೈ ಮಾಡಿ ಉದ್ದಿನಬೇಳೆ ಎಳ್ಳು ಪುಟಾಣಿ ಇಂಗು ಹಾಕಿ ಆರಿದಮೇಲೆ ಮಿಕ್ಸಿಗೆ ಹಾಕಿ ರುಚಿಯಾದ ಚಟ್ನಿ ರೆಡಿ. ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿ ಮೇಲಿಂದ ಏನ್ಬೇಕಾದ್ರೂ ಬಿಸಿಮಾಡಿ ಬೆಳ್ಳುಳ್ಳಿ ಜೀರಿಗೆ ಸಾಸಿವೆ ಒಗ್ಗರಣೆ ಆಹಾ ಗಮ್ಮತ್ತಾದ ತೇಪಲಾ ಚಟ್ನಿ 😋😋🥰🥰

Post a Comment

0 Comments