Hot Posts

6/recent/ticker-posts

ಗಮ್ಮತ್ತಾದ ಬಿಸಿಬೇಳೆಬಾತ್

ಹಾಯ್ ನಮಸ್ತೆ ನಾನು ಮಾಲತಿ… ಇವತ್ತು ನಾನು ಸ್ಪೆಷಲ್ ಆಗಿ ಬಿಸಿಬೇಳೆಭಾತ ಮಾಡೋದನ್ನ ಹೇಳ್ತಾ ಇದೀನಿ..  

1ಲೋಟ ಅಕ್ಕಿಗೆ ಹಾಫ್ ಲೋಟ ತೊಗರಿಬೇಳೆ ಇವೆರಡನ್ನು ಚೆನ್ನಾಗಿ ತೊಳೆದು ಕುಕ್ಕರಿಗೆ ಹಾಕಿ ಚಿಟಿಕೆ ಅರಿಶಿನ ಸ್ವಲ್ಪ ಉಪ್ಪು ಸಣ್ಣದಾಗಿ ಕಟ್ ಮಾಡಿದ ಕ್ಯಾರಟ್, ಬೀನ್ಸ್ ಬಟಾಟೆ ಹಶಿ ಬಟಾಣಿಕಾಳು, ಇವೆಲ್ಲವನ್ನೂ ಒಟ್ಟಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು 

ಮತ್ತೊಂದು ಬಂಡಿಗೆ ಸ್ವಲ್ಪ ತುಪ್ಪ, ಕೊಬ್ಬರಿಎಣ್ಣೆ ಹಾಕಿ ಕಾಯಿಸಿ ಶೇಂಗಾ ಗೇರುಬೀಜ ಹಾಕಿ ಕೆಂಪಿಗೆ ಹುರಿದು ತೆಗೆದಿಟ್ಟುಕೊಳ್ಳಿ, ಅದೇ ಬಂಡಿಗೆ ಬೇವಿನಸೊಪ್ಪು ಕಟ್ ಮಾಡಿದ ಟೊಮೆಟೊ ಈರುಳ್ಳಿ 2 ಹಸಿ ಮೆಣಸು ಹಾಕಿ ಫ್ರೈ ಮಾಡಿ ಮೆಣಸಿನಪುಡಿ, ಬಿಸಿಬೇಳೆಬಾತ್ ಪೌಡರ್ ಹಾಕಿ ಫ್ರೈ ಮಾಡಿ ಬೇಯಿಸಿದ ಬೇಳೆ ತರಕಾರಿ ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ ಲಿಂಬು ರಸ, ಕಟ್ ಮಾಡಿದ ಕೊತ್ತಂಬ್ರಿ ಸೊಪ್ಪು ಹಾಕಿದ್ರೆ ರುಚಿಯಾದ ಗಮ್ಮತ್ತಾದ ಬಿಸಿಬೇಳೆಬಾತ್ ರೆಡಿ 🥰😍😋

Post a Comment

0 Comments