Hot Posts

6/recent/ticker-posts

ಸ್ಪೆಷಲ್ ಆಗಿ ಒಂದು ಪಕೋಡ

ನಾನು ಮಾಲತಿ… ಇವತ್ತು ಸ್ಪೆಷಲ್ ಆಗಿ ಒಂದು ಪಕೋಡ ಮಾಡೋದನ್ನ ಹೇಳ್ತಿನಿ.... ಹರವೆ ಸೊಪ್ಪಿನ ಪಕೋಡ, ಚೆನ್ನಾಗಿ ತೊಳೆದು ಸೋಯಿಸಿದ ತೊಟ್ಟು ಇರುವ ಹರವೇಸೊಪ್ಪು,1ಲೋಟ ಅಕ್ಕಿ 4 ಸ್ಪೂನ್ ಉದ್ದಿನ ಬೇಳೆ, ಚನ್ನಾಗಿ ತೊಳೆದು 1/2 ಗಂಟೆ ನೀರಲ್ಲಿ ನೆನಸಿ ಅದಕ್ಕೆ ಖಾರಕ್ಕೆ ಬೇಕಷ್ಟು ಒಣಮೆಣಸು, 2 ಸ್ಪೂನ್ ಕುತ್ತು0ಬ್ರಿ 1 ಸ್ಪೂನ್ ಜೀರಿಗೆ, ಇಂಗು ಬೇವಿನಸೊಪ್ಪು ಹಾಕಿ ತರಿಯಾಗಿ ದೋಸೆ ಹಿಟ್ಟಿನ ಹದಕ್ಕೆ ಬೀಸಿಕೊಂಡು ರುಚಿಗೆ ಉಪ್ಪು ಹಾಕಿ, ಎಣ್ಣೆ ಕಾಯಿಸಿ ಬೀಸಿದ ಹಿಟ್ಟಿನಲ್ಲಿ ಹರವೇಸೊಪ್ಪು ಎರಡು ಕಡೆ ಅದ್ದಿಸಿ ಕರಿಯಬೇಕು ಗರಿಯಾದ ಪಕೋಡ ರೆಡಿ 🥰😍ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಒಳ್ಳೆಯ ಕಾಂಬಿನೇಶನ್


Post a Comment

0 Comments