Ad Code

ಅವ್ಯವಹಾರ ಶಂಕೆ… ಸ್ವಚ್ಛತೆ ಹೆಸರಿನಲ್ಲಿ ಬಕೆಟ್ ಹಿಡಿದರೆ?

ಭಟ್ಕಳ: ಮಾರುಕಟ್ಟೆಯಲ್ಲಿ ಅಂದಾಜು 80 ರೂಪಾಯಿ ದರದಲ್ಲಿ ದೊರೆಯುವ ಬಕೇಟ್‌ನ್ನು ವಿವಿಧ ಗ್ರಾಮ ಪಂಚಾಯತಗಳು ಹತ್ತುಪಟ್ಟು ಅಧಿಕ ಹಣ ನೀಡಿ ನೂರಾರು ಸಂಖ್ಯೆಯಲ್ಲಿ ಖರೀದಿಸಿವೆ. ಆ ಮೂಲಕ ಸ್ವಚ್ಛತೆ ಹೆಸರಿನಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಅತ್ಯಧಿಕ ಬೆಲೆ ನೀಡಿ ಲಕ್ಷಾಂತರ ರೂ ವೆಚ್ಚ ಮಾಡಿ ಬಕೇಟ್ ಖರೀದಿಸಲಾಗಿದೆ ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಮೂಗಿನ ನೇರಕ್ಕೆ 14-15ನೇ ಹಣಕಾಸು ಯೋಜನೆ ಅಡಿ ಭ್ರಷ್ಟಾಚಾರ ನಡೆದಿದೆ. ಸ್ವತಃ ಅಧಿಕಾರಿಗಳೇ ಜನಪ್ರತಿನಿಧಿಗಳಿಗೆ ಬಕೇಟ್ ಹಿಡಿದು ಹಣ ಹೊಡೆದಿರಬಹುದು ಎಂಬ ಗುಮಾನಿ ವ್ಯಕ್ತವಾಗಿದೆ. 

ಈ ಅವ್ಯವಹಾರದಲ್ಲಿ ಕೆಲ ಖಾಸಗಿ ಎಜನ್ಸಿಗಳು ಸಹ ಶಾಮೀಲಾಗಿದೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಗಳಲ್ಲಿ ಸ್ವಚ್ಛ ಗ್ರಾಮ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಮನೆ ಮನೆ ಕಸ ವಿಲೇವಾರಿಗೆ ಬಳಸಲು ಬಕೇಟ್ ಆಕಾರದ ಕಸದ ಬುಟ್ಟಿ ಖರೀದಿಸಿ, ಅದನ್ನು ಆಯ್ದ ಮನೆಗಳಿಗೆ ಹಂಚಲಾಗಿದೆ. ಹೀಗೆ ಖರೀದಿಸಲಾದ ಕಸದ ಬುಟ್ಟಿ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಬಕೇಟ್ ಹಿಡಿದ ವ್ಯಾಪಾರಿಗಳಿಗೆ ಸುಗ್ಗಿ! ಭ್ರಷ್ಟರ ಪಾಲಿಗೆ ವರ ನೀಡಿದ ಸ್ವಚ್ಛ ಭಾರತ್! ಎನ್ನುವಂತಾಗಿದೆ.

ಭಟ್ಕಳ ತಾಲೂಕಿನ ಗ್ರಾಮ ಪಂಚಾಯತನಲ್ಲಿ ತೆರಿಗೆ ಸೇರಿ 950ರೂ ದರಕ್ಕೆ ಹೊನ್ನಾವರದ ಕವಲಕ್ಕಿಯಲ್ಲಿರುವ ಅಂಗಡಿಯಿಂದ ಈ ಬಕೇಟ್‌ಗಳನ್ನು ಪೂರೈಸಿದ್ದಾರೆ. ಈ ಬಗ್ಗೆ ದಾಖಲೆ ಲಭ್ಯ ವಾಗಿದ್ದು ಇನ್ನಿತರ ಗ್ರಾಮ ಪಂಚಾಯತ್ ಇದೇ ರೀತಿ ಬಿಲ್ ಸೃಷ್ಠಿಸಿ ಬಕೇಟ್ ಖರೀದಿಸಿದ ಅನುಮಾನಗಳಿವೆ. ಈ ಬಗ್ಗೆ ತನಿಖೆ ನಡೆಯಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

HAMSA news desk


Post a Comment

0 Comments