ಚಿತ್ರ ಕೃಪೆ: ಪೀಪಲ್
ವಿಶ್ವದ ಅತ್ಯಂತ ಗಲೀಜು ಮನುಷ್ಯ ಎಂದು ಕರೆಸಿಕೊಂಡಿದ್ದ ಇರಾನಿನ ಅಮೂ ಹಾಜಿ 94 ನೆ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 76 ವರ್ಷಗಳಿಂದ ಸ್ನಾನವನ್ನೇ ಮಾಡಿರಲಿಲ್ಲ. ಅ. 23 ಭಾನುವಾರ ಅವರು ನಿಧನರಾದರು. ವಿಶೇಷವೆಂದರೆ ಅವರ ಕಲ್ಪನೆಯಲ್ಲಿ ಸ್ನಾನವನ್ನು ಮಾಡಿದರೆ ಆರೋಗ್ಯ ಹದಗೆಡುತ್ತದೆ ಎಂದು ಭಾವಿಸಿದ್ದರು. ಇವರನ್ನು ಹಳ್ಳಿಗರೆಲ್ಲ ಸೇರಿ ಬಲವಂತವಾಗಿ ಸ್ನಾನ ಮಾಡಿಸಿದ್ದರು. ಸ್ನಾನ ಮಾಡಿದ ಕೆಲವೇ ತಿಂಗಳುಗಳಲ್ಲಿ ಅವರು ಸಾವನ್ನಪ್ಪಿದ್ದು ಆಶ್ಚರ್ಯ ಎನಿಸಿದೆ
0 Comments