Ad Code

ರುಚಿಕರ ರವಾ ಇಡ್ಲಿ

ಹೊಟೆಲ್ ಹೋದ ಕೂಡ್ಲೇ ಏನುಂಟು ಅಂತಾ ಕೇಳ್ತೀರಾ… ವೇಟರ್ ಹೇಳುವ ಲಿಸ್ಟ್ ನಲ್ಲಿ ರವಾ ಇಡ್ಲಿ ಅಂದ ಕೂಡಲೇ ಬಾಯಲ್ಲಿ ನೀರು ಬರುತ್ತೆ… ಅಂದ ಹಾಗೆ ರುಚಿಕರ ವಾಗಿ ರವಾ ಇಡ್ಲಿ ಮಾಡುವುದು ಹೇಗೆ ಗೊತ್ತಾ 


                      ನಾನು ಮಾಲತಿ…🌹
ಒಂದು ಬಂಡಿಗೆ ಎಣ್ಣೆ ಹಾಕಿ, ಉದ್ದಿನಬೇಳೆ ಕಡಲೆಬೇಳೆ, ಜೀರಿಗೆ ಕರಿಬೇವು ಹಸಿ ಮೆಣಸು ಇಂಗು ಗೋಡಂಬಿ ಸಣ್ಣ ಪೀಸ್ ಹಾಕಿ ಅದಕ್ಕೆ 1 ಲೋಟ ರವೆ ಹಾಕಿ ಸ್ವಲ್ಪ ಹುರಿಯಬೇಕು ಬಿಸಿ ಆರಿದ ಮೇಲೆ 1 ಕಪ್ ಮೊಸರು ಹಾಕಿ ಚಿಟಿಕೆ eno ಅಥವಾ ಅಡುಗೆ ಸೋಡಾ ಅರ್ದ ಸ್ಪೂನ್ ಸಕ್ಕರೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಸ್ವಲ್ಪ ಹಾಲು ಕೂಡ ಸೇರಿಸಬಹುದು 

ದೋಸೆ ಹಿಟ್ಟಿನ ಹದಕ್ಕೆ ಆಗಬೇಕು ಇಡ್ಲಿ ಕುಕ್ಕರಿನಲ್ಲಿ 20 ನೀ ಬೇಯಿಸಿದರೆ ರುಚಿಯಾದ ಬಿಸಿಯಾದ ರವಾ ಇಡ್ಲಿ ರೆಡಿ 😋😋

Post a Comment

0 Comments