Hot Posts

6/recent/ticker-posts

ರಕ್ತಹೀನತೆಯ ಲಕ್ಷಣಗಳು ಯಾವುದು ಗೊತ್ತಾ? ಏನು ಮಾಡ್ಬೇಕು?

ಹೆಣ್ಣು ಮಕ್ಕಳಲ್ಲಿ ಹಾಗೂ ಇತರರಲ್ಲಿ ರಕ್ತಹೀನತೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ರಕ್ತ ಹೀನತೆ ಆಗಿದೆ ಎಂದು ಈ ಲಕ್ಷಣಗಳಿಂದ ಅರಿಯಬಹುದು. ರಕ್ತಹೀನತೆ ಉಂಟಾದಾಗ ನಿಶ್ಯಕ್ತಿ, ಬೇಗ ಸುಸ್ತಾಗುವುದು, ತಲೆ ತಿರುಗುವುದು, ಬಾಯಲ್ಲಿ, ನಾಲಿಗೆಯಲ್ಲಿ ಹುಣ್ಣುಗಳು, ಹೃದಯ ಬಡಿತದ ವೇಗ ಜಾಸ್ತಿಯಾಗುವುದು, ಮಕ್ಕಳಲ್ಲಿ ಕಲಿಕೆಯಲ್ಲಿ / ಕ್ರೀಡೆಯಲ್ಲಿ ಆಸಕ್ತಿ ಇಲ್ಲದಿರುವುದು, ಏಕಾಗ್ರತೆಯ ಕೊರತೆ ಉಂಟಾಗುವುದು, ಕಾಲಿನಲ್ಲಿ ಸೆಳೆತ ಉಂಟಾಗುವುದು ಕಂಡಬರುತ್ತದೆ ಅಲ್ಲದೆ ಸೊಂಕುಗಳಿಂದ ರಕ್ಷಣೆಗಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ,

ಇಂತಹ ಸಂದರ್ಭಗಳಲ್ಲಿ ಅಧಿಕ ಕಬ್ಬಿಣಾಂಶವುಳ್ಳ ಈ ಕೆಳಗಿನ ಆಹಾರವನ್ನು ಹೆಚ್ಚು ಸೇವಿಸುವುದು ಸೂಕ್ತ

ಹಸಿರು ತರಕಾರಿಗಳು ಹಾಗೂ ಹಣ್ಣುಗಳು, ಗೋಧಿ, ರಾಗಿ ಹಾಗೂ ಮೊಳಕೆ ಕಾಳುಗಳು, ಶೇಂಗಾ ಬೀಜ, ಬೆಲ್ಲ, ಒಣ ಹಣ್ಣುಗಳು, ಮೊಟ್ಟೆ, ಮೀನು ಹಾಗೂ ಮಾಂಸಹಾರ ಸೇವನೆ. ವಿಟಮಿನ್-ಸಿ ಯುಕ್ತ ಹಣ್ಣುಗಳಾದ ಕಿತ್ತಳೆ, ನೆಲ್ಲಿಕಾಯಿ, ನಿಂಬೆಹಣ್ಣು ಸೇವನೆಯಿಂದ ದೇಹದಲ್ಲಿ ಕಬ್ಬಿಣ್ಣಾಂಶ ಹೀರುವಿಕೆ ಜಾಸ್ತಿಯಾಗುವುದು. 

ಆರೋಗ್ಯ ಮಾಹಿತಿಗಾಗಿ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಉತ್ತರ ಕನ್ನಡ ಜಿಲ್ಲೆ ಇವರ ಆರೋಗ್ಯ ಕಾರ್ಡ್ ನಿಂದ

Post a Comment

0 Comments