Ad Code

ನೀವು ಮಾಡಿದ್ರಾ ಆಲೂಗಡ್ಡೆ ಸಾಗು?

ಇದು ತುಂಬಾ ರುಚಿ ಆಗಿರುತ್ತೆ… hi ನಾನು ಮಾಲತಿ… ಆಲೂಗಡ್ಡೆ ಸಾಗು ಮಾಡುವ ವಿಧಾನ ಹೇಳ್ತಾ ಇದೀನಿ

 4 ಆಲೂ ಚೆನ್ನಾಗಿ ಬೇಯಿಸಿ ಸಣ್ಣ ಹೋಳು ಮಾಡಿಟ್ಟುಕೊಳ್ಳಿ, ಒಗ್ಗರಣೆ 4 ಸ್ಪೂನ್ ಎಣ್ಣೆ, ಸಣ್ಣಗೆ ಹೆಚ್ಚಿದ 4 ಈರುಳ್ಳಿ, ಖಾರಕ್ಕೆ ಬೇಕಷ್ಟು ಹಸಿ ಮೆಣಸು, ಬೇವಿನ ಸೊಪ್ಪು ಜೀರಿಗೆ, ಇಂಗು ಚಿಟಿಕೆ ಅರಿಶಿನ ಹಾಕಿ ಫ್ರೈ ಮಾಡಿ


 2 ಸ್ಪೂನ್ ಹುರಿದ ಕಡಲೆಹಿಟ್ಟನ್ನು ನೀರಲ್ಲಿ ಕದಡಿ ಇಟ್ಟುಕೊಳ್ಳಬೇಕು ಎಲ್ಲಾ ಫ್ರೈ ಆದಮೇಲೆ ಕಡಲೆಹಿಟ್ಟು ಬೇಯಿಸಿದ ಆಲೂ ಉಪ್ಪು ರುಚಿಗೆ ತಕ್ಕಷ್ಟು ಸಕ್ಕರೆ  ಲಿಂಬು ಕುತ್ತು0ಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿದ್ರೆ ರುಚಿಯಾದ ಆಲೂ ಸಾಗು ರೆಡಿ 😋😋

Post a Comment

0 Comments