Ad Code

ಮೆಂತೆ ಸೊಪ್ಪಿನ ಪರಾಟ

         

ಮೆಂತೆ ಸೊಪ್ಪಿನ ಪರಾಟ ಮಾಡುವ ವಿಧಾನ,, ಮೊದಲು ಎಳೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು, ಗೋದಿ ಹಿಟ್ಟು ಒಂದು ಬೌಲ್,2 ಸ್ಪೂನ್ ಕಡಲೆಹಿಟ್ಟು ಸ್ವಲ್ಪ ಶುಂಠಿ ತುರಿ ಸಣ್ಣದಾಗಿ ಕಟ್ ಮಾಡಿದ ಹಶೀಮೆಣಸು ಕೊತ್ತಂಬ್ರಿ ಸೊಪ್ಪು ಉಪ್ಪು ಅರಿಶಿನ ಸ್ವಲ್ಪ 1 ಸ್ಪೂನ್ ಗರಂಮಸಾಲಾ ಪೌಡರ್ ಹೆಚ್ಚಿಟ್ಟ ಮೆಂತೆಸೊಪ್ಪು ಎಲ್ಲವನ್ನು ಸೇರಿಸಿ ಬೇಕಷ್ಟು ನೀರನ್ನು ಹಾಕಿ ರೊಟ್ಟಿಹಿಟ್ಟು ಮಾಡಿಟ್ಟುಕೊಳ್ಳಬೇಕು 2 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ನಾದಿ 10 ನಿಮಿಷ ಒಂದು ಪ್ಲೇಟ್ ಮುಚ್ಚಿಟ್ಟು ರೊಟ್ಟಿ ಒರೆದರೆ ಮೆಂತೆಸೊಪ್ಪಿನ್ ಪರಾಟ ರೆಡಿ 😋😋ಎಣ್ಣೆ ತುಪ್ಪ ಬೆಣ್ಣೆ ಯಾವದನ್ನು ಬೇಕಾದ್ರು ಹಾಕಿ ಬೇಯಿಸಬಹುದು…

ನಾನು ಮಾಲತಿ🌹

ಪರಾಟ ಜೊತೆ ರಾಜಮಾ ಕರ್ರಿ...... 7 ಗಂಟೆ ರಾಜಮಾ ಕಾಳನ್ನು ನೆನೆಸಿಡಬೇಕು ನಂತರ ಕುಕ್ಕರಿನಲ್ಲಿ 6 ವಿಷಲ್ ಕೂಗಿಸಿ ಬೇಯಿಸಿಟ್ಟುಕೊಂಡು ಒಗ್ಗರಣೆಗೆ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆ ಹಾಕಿ ಪಲಾವಿನಯಲೆ1, ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಹಶೀಮೆಣಸು ಜೀರಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಎಲ್ಲವನ್ನು ಫ್ರೈ ಮಾಡಿ ಪೇಸ್ಟ್ ಮಾಡಿದ ಟೊಮೆಟೊ ಪ್ಯೂರಿ ಹಾಕಿ ಅದನ್ನು ಚೆನ್ನಾಗಿ ಫ್ರೈ ಮಾಡಿ ಮೆಣಸಿನಪುಡಿ ಜೀರಾ ಪೌಡರ್ ಕುತ್ತುoಬರಿ ಪೌಡರ್ ಗರಂಮಸಾಲಾ ಪುಡಿ ಉಪ್ಪು ರುಚಿಗೆ ಸ್ವಲ್ಪ ಸಕ್ಕರೆ ಬೇಕಾದಲ್ಲಿ ಲಿಂಬು ಬೇಯಿಸಿಟ್ಟ ರಾಜಮಾ ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಬೇಕು ಕೊನೆಯಲ್ಲಿ ಕಸುರಿಮೆತಿ ಕುತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ರಾಜಮಾ ಕರ್ರಿ ರೆಡಿ 🥰😍😋😋

Post a Comment

0 Comments