Ad Code

ಕಾಜು ಮಸಾಲಾ😋

ಮೊದಲು ಪಾತ್ರೆಯಲ್ಲಿ 4 ಈರುಳ್ಳಿ, ಸ್ವಲ್ಪ ಗೇರುಬೀಜ ನೀರು ಹಾಕಿ ಕುದಿಸಿ, ನೀರನ್ನು ಸೋಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು, ಒಗ್ಗರಣೆಗೆ ಜಾಸ್ತಿ ಎಣ್ಣೆ ಹಾಕಿ ಸ್ವಲ್ಪ ಗೇರುಬೀಜಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟು ಕೊಂಡು, 

           ಮಾಲತಿ ಹೆಗಡೆ😍
ಅದೇ ಎಣ್ಣೆಯಲ್ಲಿ ಜೀರಿಗೆ 2 ಎಲ್ಲಕ್ಕಿ 2 ಚಕ್ಕೆ 1 ಪಲಾವ್ ಎಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಹಸಿಮೆಣಸು, ಚೆನ್ನಾಗಿ ಫ್ರೈ ಮಾಡಿ ದನಿಯ ಪುಡಿ, ಜೀರಾಪುಡಿ, ಮೆಣಸಿನಪುಡಿ, 2 ಸಣ್ಣಗೆ ಹೆಚ್ಚಿದ ಟೊಮೆಟೊ ಉಪ್ಪುಹಾಕಿ ಗೋಲ್ಡನ್ ಕಲರ್ ಬರೋವರೆಗೂ ಫ್ರೈ ಮಾಡಿ, ರುಬ್ಬಿಟ್ಟು ಕೊಂಡಿದ್ದನ್ನು ಹಾಕಿ ಹುರಿದಿಟ್ಟುಕೊಂಡ ಗೇರುಬೀಜ ಹಾಕಿ ಚೆನ್ನಾಗಿ ಕುದಿಸಿ ಲಿಂಬು ಕೊತ್ತಂಬ್ರಿ ಸೊಪ್ಪು ಕಸೂರಿ ಮೇತಿ ಹಾಕಿದ್ರೆ ರುಚಿಯಾದ ಕಾಜುಮಸಾಲಾ ರೆಡಿ😋
                                ಚಪಾತಿ ಜೊತೆ 

Post a Comment

0 Comments