Ad Code

ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು, ಗಮನ ಸೆಳೆದಿದೆ ಅವರ ಟ್ವೀಟ್!

ರಾಷ್ಟ್ರದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮುರ್ಮು ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿ ಮಾಜಿ ಸಚಿವ ಯಶವಂತ್ ಸಿನ್ಹಾ ಕಣಕ್ಕೆ ಇಳಿದಿದ್ದರು. ದ್ರೌಪದಿ ಅವರು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬುಡಕಟ್ಟು ಸಮುದಾಯದ ಪ್ರಥಮ ಮಹಿಳೆಯಾಗಿದ್ದಾರೆ. ದ್ರೌಪದಿ ಜು. 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜುಲೈ 21ರಂದು ಅವರು ಮಾಡಿದ ಟ್ವೀಟ್ ಗಮನ ಸೆಳೆದಿದೆ. ಬಹುತೇಕ ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ. ಚೈತನ್ಯ ತುಂಬಿದ ಮಾರ್ಮಿಕವಾಗಿ ಮಾತುಗಳನ್ನು ಟ್ರೀಟ್ ನಲ್ಲಿ ಆಡಿದ್ದಾರೆ

"ಜೀವನವು ಕನ್ನಡಿ, ನಾವು ನಗುವಾಗ ಮಾತ್ರ ಅದು ನಗುತ್ತದೆ!😊😊"

ಎಂದಿದ್ದು ಅವರ ಟ್ವೀಟ್ ಗಮನ ಸೆಳೆದಿದೆ 

Post a Comment

0 Comments