Ad Code

ಕಾರ್ಟೂನ್ ನಲ್ಲಿ ವೈವಿಧ್ಯವಿತ್ತು… ಇದನ್ನೊಮ್ಮೆ ನೋಡಿ

ಹಳೆಯ ಪತ್ರಿಕೆಗಳು ಆಗಿನ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯತೆಯನ್ನೇ ಪಡೆದುಕೊಂಡಿದ್ದವು. ಬರವಣಿಗೆಯ ಶೈಲಿ ಬರವಣಿಗೆಯ ಮಾದರಿ, ಪುಟದ ವಿನ್ಯಾಸ ಎಲ್ಲವೂ ವಿಭಿನ್ನವೇ. 1989 ರಲ್ಲಿ ಮುನ್ನಡೆ ಪತ್ರಿಕೆ ಕನ್ನಡದಲ್ಲಿ ಪ್ರಸಿದ್ಧಿ ಪಡೆದುಕೊಂಡಿತ್ತು. ಪ್ರಧಾನ ಸಂಪಾದಕರಾಗಿ ಗಣೇಶ ಹೆಗಡೆ ದೊಡ್ಮನೆ, ಸಂಪಾದಕರಾಗಿ ಎಂವಿ ಶರ್ಮಾ ತದ್ದಲಸೆ, ಕಲೆ ಮತ್ತು ವಿನ್ಯಾಸಕಾರರಾಗಿ ಗ. ಮ. ತುಂಬೆಮನೆ ಕಾರ್ಯನಿರ್ವಹಿಸುತ್ತಿದ್ದಾಗಿನ ದೀಪಾವಳಿ ವಿಶೇಷಾಂಕ ನಮ್ಮ ಕೈನಲ್ಲಿ ಈಗ ಲಭ್ಯವಾದಾಗ ಪುಟವನ್ನು ತಿರುವುತ್ತಾ ಹೋದೆವು… ಚಿತ್ರಲೇಖ ಮುದ್ರಣ ಇದನ್ನು ಮುದ್ರಿಸಿತ್ತು. ಎಲ್ಲವೂ ವಿಭಿನ್ನವೇ ಎನಿಸಿತು.


ನಮ್ಮ ಗ. ಮ. ತುಂಬೆಮನೆ ಅವರು ಕಾರ್ಟೂನ್ ಮೂಲಕ ಒಂದು ಸಂದೇಶ ಸಾರಿದ್ದರು. ಶಿರಸಿಯಲ್ಲಿ ಪ್ರಸಿದ್ಧ ಹೆಗಡೆ ರೇಡಿಯೋ ಸರ್ವಿಸ್ ಬಗ್ಗೆ ಒಂದು ಕಾರ್ಟೂನ್ ರಚಿಸಿದ್ದರು.

ಮಾವನ ಬಳಿ ಅಳಿಯ ಕೇಳುತ್ತಾನೆ

 "ಏನು ಮಾವ ನನಗೆ ಅಂತ ದೀಪಾವಳಿಗೆ ಟಿವಿ ತಗೊಂಡ್ರಾ?"

ಅದಕ್ಕೆ ಮಾವ ಹೇಳುತ್ತಾನೆ

"ಅಲ್ವೋ ಹಳೆ ರೇಡಿಯೋ ಎಲ್ಲೂ ರಿಪೇರಿಯಾಗದೆ ಹೆಗಡೆ ರೇಡಿಯೋಕ್ಕೆ ಒಯ್ತಾ ಇದೀನಿ!!"

ಪ್ರಚಾರಕ್ಕೆ ಪ್ರಚಾರ, ಜನರಿಗೆ ಇಷ್ಟವಾಗುವಂತೆ ಹೇಳುವ ಪತ್ರಿಕೆಗಳ ಮನೋಭಾವನೆ ತುಂಬಾ ಖುಷಿಯಾದದ್ದು ಸುಳ್ಳಲ್ಲ. 

ಕೃಪೆ: ಮುನ್ನಡೆ ಪತ್ರಿಕೆ


Post a Comment

0 Comments