Ad Code

ನಾಮಧಾರಿ ಸಮಾಜದ ಬಡ ವಿದ್ಯಾರ್ಥಿ ಧನ ಸಹಾಯಕ್ಕೆ ಅರ್ಜಿ ಆಹ್ವಾನ

ಅಂಕೋಲಾ: ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಎಸ್‌.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ನಾಮಧಾರಿ ಸಮಾಜದ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಲ್.ಕೆ. ನಾಯ್ಕ ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಪಡೆದ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವ್ಯಾಸಂಗಕ್ಕಾಗಿ ತಲಾ 5 ಸಾವಿರ ರೂ. ಟ್ರಸ್ಟ್‌ನಿಂದ ನೀಡಲು ನಿರ್ಣಯಿಸಲಾಗಿದೆ ಹಾಗೂ ಉ.ಕ. ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ 2 ಸಾವಿರ ರೂ. ನೀಡಿ ಪುರಸ್ಕರಿಸಲಾಗುವುದು. ಅರ್ಜಿದಾರರು ಟ್ರಸ್ಟ್‌ನಿಂದ ಪಡೆದ ಅರ್ಜಿ ನಮೂನೆಯನ್ನು ಮಾತ್ರ ಉಪಯೋಗಿಸತಬೇಕು.ಜೂ. 10ರ ಒಳಗೆ 'ಸ್ವಾಮಿ ವಿವೇಕಾನಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಂಕೋಲಾ' ಇವರಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪಿ.ಕೆ. ನಾಯ್ಡ 8088327332, 9448573200 ಸಂಪರ್ಕಿಸಬಹುದು.


Post a Comment

0 Comments