Ad Code

Nmms ಪರೀಕ್ಷೆ ಗೋಳಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ಇದರ ವಿದ್ಯಾರ್ಥಿಗಳು 2021-22ನೇ ಸಾಲಿನ Nmms ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಯನ್ನು ಮಾಡಿರುತ್ತಾರೆ... ಈ ಪರೀಕ್ಷೆಯಲ್ಲಿ ಪ್ರಸ್ತುತ ಒಂಭತ್ತನೇ ವರ್ಗದ ಕುಮಾರಿ ಚಿನ್ಮಯಿ ಶ್ರೀಪಾದ ಹೆಗಡೆ,ದೊಡ್ಮನೆ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ಅಂತೆಯೇ ಕುಮಾರ ಚೈತನ್ಯ ಗಣಪತಿ ಹೆಗಡೆ ಹೊಸ್ಮನೆ ಐದನೇ ಸ್ಥಾನವನ್ನು ,ಕುಮಾರಿ ತೃಪ್ತಿ ರಾಮಚಂದ್ರ ಗೌಡ ಮಳಲಿ ಹತ್ತನೇ ಸ್ಥಾನವನ್ನು,ಕುಮಾರಿ ಪೂಜಿತ ಕೃಷ್ಣಮೂರ್ತಿ ಭಟ್ ನಾಡಗುಳಿ ಇವಳು ಹದಿನೆಂಟನೇ ಸ್ಥಾನವನ್ನು ಪಡೆದು ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಸಿದ್ಧಿವಿನಾಯಕ ವಿದ್ಯಾಪ್ರಸಾರ ಸಮಿತಿಯ ಅಧ್ಯಕ್ಷರಾದ  ಎಂ ಎಲ್ ಹೆಗಡೆ ಹಲಸಿಗೆ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮುಖ್ಯಾಧ್ಯಾಪಕರಾದ  ಎಂ ಜಿ ಹೆಗಡೆ ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.

Post a Comment

0 Comments