Ad Code

ಉತ್ತರ ಕನ್ನಡದಲ್ಲಿ ಗೃಹರಕ್ಷಕರ ನೇಮಕಾತಿ


Click image just ₹599

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಗೆ ಗೃಹ ರಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಗೃಹರಕ್ಷಕಕ ದಳದ ವತಿಯಿಂದ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ 234 ಗೃಹರಕ್ಷಕರ ಹುದ್ದೆ ನೇಮಕ ಮಾಡಿಕೊಳ್ಳಲು ಜೂ.17ರಂದು ಬೆಳಿಗ್ಗೆ 9 ಗಂಟೆಗೆ ಪೊಲೀಸ್‌ ಕವಾಯತು ಮೈದಾನದಲ್ಲಿ ನೇರ ನೇಮಕಾತಿ ಇದೆ. ಆಸಕ್ತ 20ರಿಂದ 45 ವರ್ಷದೊಳಗಿನ ಆಯಾ ಘಟಕದ ವ್ಯಾಪ್ತಿಯಲ್ಲಿ ವಾಸವಿರುವ ಅಭ್ಯರ್ಥಿಗಳು ಆಧಾರ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಟಿಸಿ, ವೈದ್ಯಕೀಯ ಪ್ರಮಾಣ ಪತ್ರ ಮತ್ತು 2 ಭಾವಚಿತ್ರ ಸಹಿತ ಕಾರವಾರದ ಕಾಜುಬಾಗದಲ್ಲಿರುವ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂರವಾಣಿ ಸಂಖ್ಯೆ: 08382- 226361ಗೆ ಸಂಪರ್ಕಿಸಬಹುದು. ಉದ್ಯೋಗ ಅರಸುತ್ತಿರುವವರ ಮಾಹಿತಿಗೆ


Post a Comment

0 Comments