Ad Code

"ಮುಂಗಾರು ಆಗಮನಕ್ಕೆ... ಬೆಳ್ಳಕ್ಕಿಗಳಿಂದ ಗ್ರೀನ್ ಸಿಗ್ನಲ್"

    

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದ, ಸೋಂದಾ ಗ್ರಾಮದಲ್ಲಿರುವ ಮುಂಡಿಗೆ ಕೆರೆ ಪಕ್ಷಿಧಾಮಕ್ಕೆ ಬೆಳ್ಳಕ್ಕಿಗಳು ಹಿಂಡು ... ಹಿಂಡಾಗಿ ಬಂದಿಳಿಯುತ್ತಿವೆ.ಇದು ಮುಂಗಾರಿನ ಆಗಮನಕ್ಕೆ ಮುನ್ಸೂಚನೆಯಾಗಿದೆ.

ಸೋಂದಾ ಜಾಗೃತ ವೇದಿಕೆ (ರಿ.)ಯು ೧೯೯೫ ರಿಂದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ದಿವ್ಯ ಮಾರ್ಗದರ್ಶನದಲ್ಲಿ ಮುಂಡಿಗೆ ಕೆರೆ ಪಕ್ಷಿಧಾಮದ ಆಗುಹೋಗು ಗಳನ್ನು ತೀರಾ ಸನೀಹದಿಂದ, ದಾಖಲಿಸುತ್ತಾ ಬಂದಿದೆ . ಇದುವರೆಗಿನ ದಾಖಲೆ ಪ್ರಕಾರ ಬೆಳ್ಳಕ್ಕಿಗಳು ಮುಂಡಿಗೆ ಕೆರೆಗೆ ಇಳಿದು ಒಂದು ದಿನ ವಸತಿ ಮಾಡಿದರೆ ಅಲ್ಲಿಂದ ೫/೬ದಿನಗಳಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗಿದ್ದು ದಾಖಲೆ ಆಗಿದೆ


ಬೆಳ್ಳಕ್ಕಿಗಳು ವರ್ಷ ಮೇ ತಿಂಗಳ ೧೩ರಿಂದಾ ಕೆರೆ ಸಮೀಕ್ಷೆ ಮಾಡ್ತಾ ಬಂದಿವೆ.ದಿನಾಲೂ ಮುಂಜಾನೆ ಹಾಗೂ ಸಂಜೆ ಕೆರೆಯ ಮೇಲ್ಗಡೆ ಹಾರಾಟ ಮಾಡಿ ಕೆರೆಯಲ್ಲಿಯ ಸ್ಥಿತಿ--ಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದು, ದಿನಾಂಕ ೩೧/೫/೨೦೨೨ರಂದು ಸಂಜೆ ಸುಮಾರು ೧೦೦ಕ್ಕೂ ಅಧಿಕ ಬೆಳ್ಳಕ್ಕಿಗಳು ಕೆರೆಯಲ್ಲಿಇಳಿದಿರುವದು ಕಂಡು ಬಂತು.ಆದರೆ ಸಂಜೆ ೭-೨೦ರ ವೇಳಗೆ ಕೆಲವೊಂದು ಹಾರಿಹೋದವು , ಸುಮಾರು ೬೦ರಿಂದಾ ೭೦ ಪಕ್ಷಗಳು ಕೆರೆಯಲ್ಲಿ ವಸತಿ ಮಾಡಿವೆ.ಇದು ಈ ವರ್ಷದ ಮುಂಗಾರು ಮಳೆ ಆಗಮನದ ಮುನ್ಸೂಚನೆ ಆಗಿದೆ.ಕಾರಣ ಇನ್ನು ೫/೬ ದಿನಗಳಲ್ಲಿ ಉತ್ತಮ ಮಳೆ ಪ್ರಾರಂಭವಾಗುತ್ತದೆ. ಸುಮಾರು ೧೯೮೦ ರ ವೇಳೆಗೆ ಕರ್ನಾಟಕದ ಖ್ಯಾತ ಪಕ್ಷಿ ತಜ್ಞ ದಿ//, ಪಿ.ಡಿ.ಸುಧರ್ಶನ್.ಮುಂಡಿಗೆ ಕೆರೆಗೆ ಬೆಳ್ಳಕ್ಕಿಗಳು ಮಳೆಗಾಲದಲ್ಲಿ ಆಗಮಿಸಿ , ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟುತ್ತವೆ ಎಂಬುದನ್ನು;ಪ್ರ ಪ್ರಥಮವಾಗಿ ಹೊರಜಗತ್ತಿಗೆ ಪರಿಚಯಿಸಿದರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಿಗೆ ಗಿಡಗಳ ಮೇಲೆ ಪಕ್ಷಿಗಳ ವಂಶಾಭಿವೃದ್ಧಿ ತಾಣ ಇದೊಂದೇ ಆಗಿದೆ , ಎಂಬುದು ಉಲ್ಲೇಖನೀಯ.

ಚಿತ್ರ ಕೃಪೆ - ಪ್ರಸಾದ್ ಹೆಗಡೆ ವಾಜಗದ್ದೆ. ಸೋಂದಾ

ಮಾಹಿತಿ:-ರತ್ನಾಕರ ಹೆಗಡೆ ಬಾಡಲಕೊಪ್ಪ ಸೋಂದಾ.


Post a Comment

0 Comments