Ad Code

ನೆಗಡಿ ಆರದಿದ್ದರೆ ಮತ್ತು ತಲೆಗೂದಲು ಉದುರಿದರೆ

ಯಾವಾಗಲೂ ನೆಗಡಿ ಆರದಿದ್ದರೆ:

ದಿನಾಲೂ ಬೆಳಿಗ್ಗೆ ಅಥವಾ ರಾತ್ರಿ ಮಲಗುವಾಗ, ಓಮ ಹಾಕಿ ಕುದಿಸಿದ ನೀರು ( ಅಜವಾನದ ನೀರು ಕುಡಿಯಲಿಕ್ಕೆ ಕೊಡಬೇಕು) ೩ ದಿವಸ

ಇಲ್ಲವೆ

ಅನ್ನ ಬಸಿದು ಗಂಜೀ ತಿಳಿ ತೆಗೆದು, ಅರ್ಧ ಸೇರು ತಿಳಿಗೆ ೨ ತೊಲೆ ಬೆಣ್ಣೆ ಹಾಕಿ ಕುಡಿಯಲಿಕ್ಕೆ ಕೊಡಬೇಕು. ೭ ದಿವಸ. ದಿನಕ್ಕೆರಡು ಸಾರೆ ಯಂತೆ ಕೊಡಬೇಕು.

ತಲೆಗೂದಲು ಉದುರಿದರೆ:

ಬೇಲಿ ಔಡಲ ಬೇರನ್ನು ಲಿಂಬೇರಸದಲ್ಲಿ ತೆಯ್ದು ದಿನಕ್ಕೆ ೩ ಸಾರೆಯಂತೆ ೯ ದಿವಸ ಹಚ್ಚಬೇಕು. 

ಕೃಪೆ: ಅನುಭವಿಕ ವೈದ್ಯ

(ಅನುಭೂತ ಯೋಗ ಸಂಗ್ರಹ)

ಗ. ನೀ. ಪಟವರ್ಧನ


Post a Comment

0 Comments