Ad Code

ಮೊಡವೆಗಳಿಗೆ ಇಲ್ಲಿದೆ ಪರಿಹಾರ

ಮೊಡವೆ ಹದಿಹರೆಯದಲ್ಲಿ ಬರುವ ಮುಖದಲ್ಲಿ ಸಣ್ಣ ಸಣ್ಣ ಗುಳ್ಳೆಗಳ ಲಕ್ಷಣ. ಕೆಲವೊಮ್ಮೆ ಇದು ಅಲರ್ಜಿ ಯಿಂದಲೂ ಬರಬಹುದು.

ಇಲ್ಲಿದೆ ಪರಿಹಾರ 

ಕೊತ್ತಂಬರಿ ಸೊಪ್ಪಿನ ರಸ ಲಿಂಬೆ ರಸದಲ್ಲಿ ಸೇರಿಸಿ ಹಚ್ಚುವುದು, ಹಾಲಿನ ಕೆನೆ ಅರಿಶಿನ ಸೇರಿಸಿ ಹಚ್ಚುವುದು, ಸೌತೆಕಾಯಿ ಸಿಪ್ಪೆ ಯನ್ನು ನಿಂಬೇರಸದಲ್ಲಿ ಹಚ್ಚುವುದು, ಎಳೆ ನೀರಿನಿಂದ ಮುಖ ತೊಳೆದರೆ ಗುಣವಾಗುವುದು ಮೊಡವೆ. ಕಾಳುಮೆಣಸು ನೀರಿನಲ್ಲಿ ತೆಗೆದು ಸ್ವಲ್ಪ ಹಚ್ಚಿ, ಕಿತ್ತಲೆ ಸಿಪ್ಪೆಯನ್ನು ಮೊಡವೆಗೆ ಸವ್ರುತ್ತಾ ಬಂದರೆ ಮೊಡವೆ ಮಾಯ, ಟೊಮೇಟೊ ಹಣ್ಣಿನ ರಸ ಕೂಡ ಹಚ್ಚಬಹುದು, ಕೆಂಪು ಹರಿವೆ ಯನ್ನು ಸುಟ್ಟು ಅದರ ಕರೆಯನ್ನು ಬೆಣ್ಣೆಯಲ್ಲಿ ಕಲಸಿ ಹಚ್ಚಿ, ದಾಲ್ಚಿನಿ ಚಕ್ಕೆಯನ್ನು ನಿಂಬೆರಸದಲ್ಲಿ ತೇದು ಹಚ್ಚುವುದು, ಬಿಳಿಯ ಈರುಳ್ಳಿ ರಸ ಪುದೀನಾ ರಸ ಜೇನುತುಪ್ಪದಲ್ಲಿ ಕಲಸಿ ಹಚ್ಚಿ, ನುಣುಪಾದ ಹುತ್ತದ ಮಣ್ಣನ್ನು ನೀರಿನಲ್ಲಿ ಕಲಸಿ ಹಚ್ಚಿ. 


ಗಮನಿಸಿ: ಮೇಲಿನ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ


ಮಂಜುನಾಥ ಹೆಗಡೆ ಹುಡ್ಲಮನೆ 

ಮನೆ ನಾಟಿ ವೈದ್ಯರು 


Post a Comment

0 Comments