Ad Code

ರೈತರೇ ಜೂನ್ ತಿಂಗಳಲ್ಲಿ ನೀವೇನು ಮಾಡಬೇಕು

ಮಳೆಗಾಲದ ಪೂರ್ವದಲ್ಲಿ ಅಡಿಕೆ ಕೊಳೆ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಶೇ. 1ರ ಬೋರ್ಡೋ ದ್ರಾವಣವನ್ನು ಗೊನೆಗೆ ಸಿಂಪಡಿಸಬೇಕು. ಜಾಸ್ತಿ ಕೊಳೆ ರೋಗ ಕಂಡುಬರುವ ಪ್ರದೇಶದಲ್ಲಿ ಔಷಧ ಸಿಂಪರಣೆಯ ನಂತರ ಗೊನೆಗಳನ್ನು ಪ್ಲಾಸ್ಟಿಕ್ ಹಾಳೆ (200 ಗೇಜ್) ಯಿಂದ ಮುಚ್ಚಿ (ನೀರು ಬೀಳದಂತೆ, ಗಾಳಿಯಾಡುವಂತೆ ಕಟ್ಟುವುದು ಉತ್ತಮ.

ಕಾಳುಮೆಣಸಿನ ಬಳ್ಳಿಯ ಸೊರಗು ರೋಗ ನಿಯಂತ್ರಣಕ್ಕೆ ಬುಡದ ಸುತ್ತಲೂ ಅರ್ಧ ಕೇಜಿ ಬೇವಿನ ಹಿಂಡಿಯನ್ನು ಟ್ರೈಕೋಡರ್ಮಾ ಸೇರಿಸಿ ಹಾಕಬೇಕು. ಕಾಳುಮೆಣಸಿನ ಬಳ್ಳಿಯ ನೆಲದ ಮೇಲೆ ಹಬ್ಬಿರುವ ಕುಡಿಗಳನ್ನು (Runner shoots) ನೆಲದಿಂದ ಮೇಲೆ ಎತ್ತಿ ಕಟ್ಟುವುದು ಅಥವಾ ಕತ್ತರಿಸಿ ತೆಗೆಯುವುದು.

ಮಳೆಗಾಲದಲ್ಲಿ ಕಾಳುಮೆಣಸಿನ ಬಳ್ಳಿಯ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಪ್ಲಾಸ್ಟಿಕ್ ಹಾಳೆಯಿಂದ ಬುಡದ 4 ಅಡಿ ಸುತ್ತಲೂ ಮುಚ್ಚಿಗೆ ಮಾಡುವುದು.

ಮಾವು ಮತ್ತು ಗೇರಿನ ಗಿಡಗಳಲ್ಲಿ ಕೊಯ್ಲಿನ ನಂತರ ಅನಗತ್ಯ ಟೊಂಗೆಗಳನ್ನು ಕತ್ತರಿಸಿ (Pruning) ತೆಗೆದು ಬೋರ್ಡೋ ಪೇಸ್ಟ ಹಚ್ಚಬೇಕು.

ಎಲ್ಲಾ ಬೆಳೆಗಳಿಗೆ ಶಿಫಾರಿತ ರಾಸಾಯನಿಕ ಗೊಬ್ಬರ ಹಾಕುವುದು.

ಟೊಮ್ಯಾಟೊ, ಬದನೆ, ಬೆಂಡೆ, ಕುಂಬಳಕಾಯಿ, ಬೂದುಗುಂಬಳಕಾಯಿ, ಸೋರೆಕಾಯಿ, ಹಾಗಲಕಾಯಿ, ಹೀರೆಕಾಯಿ, ಸೌತೆಕಾಯಿ, ಮಿಡಿ ಸೌತೆಕಾಯಿ, ಮೆಣಸಿನಕಾಯಿ, ತಿಂಗಳ ಅವರೆ (ಬೀನ್ನ), ಚವಳೀಕಾಯಿ, ನುಗ್ಗೆ, ತೊಂಡೆ ನಾಟಿ ಮಾಡಲು ಸೂಕ್ತ ಸಮಯ.

ಕೃಪೆ: ಸಸ್ಯ ಆರೈಕೆ 

ಅಗ್ರಿಕಲ್ಟರಲ್ ಸರ್ವೀಸ್ ಎಂಡ್ ಡೆವಲಪ್‌ಮೆಂಟ್ ಕೋ-ಆಪ್. ಸೊಸೈಟಿ ಅ., ಶಿರಸಿ (ಉ. ಕ)

Post a Comment

0 Comments